ಕನೌಜ್( ಉತ್ತರಪ್ರದೇಶ): ಉತ್ತರ ಪ್ರದೇಶದಲ್ಲಿ ಎಸ್ಪಿ- ಬಿಎಸ್ಪಿ ಮೈತ್ರಿಕೂಟ ಬಿಜೆಪಿ ಹಣಿಯಲ್ಲಿ ತೀವ್ರ ಕಸರತ್ತು ನಡೆಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭರ್ಜರಿ ರ‍್ಯಾಲಿಗಳನ್ನ ನಡೆಸುತ್ತಿದೆ. ಈ ನಡುವೆ ನಿನ್ನೆ ಕನೌಜ್ನಲ್ಲಿ ಅಖಿಲೇಶ್ ಯಾದವ್ ಅವರ ರ್ಯಾಲಿಯನ್ನ ಆಯೋಜನೆ ಮಾಡಲಾಗಿತ್ತು.
ರ‍್ಯಾಲಿಗೆ ನುಗ್ಗಿದ ಗೂಳಿ... ಜನಜಂಗುಳಿಯಲ್ಲಿ ಆ ಹೋರಿ ಮಾಡಿದ್ದೇನು? - uttara pradesh
ನಿನ್ನೆ ಕನೌಜ್ನಲ್ಲಿ ಆಯೊಜನೆ ಅಖಿಲೇಶ್ ಯಾದವ್ ಅವರ ರ್ಯಾಲಿ ವೇಳೆಯಲ್ಲಿ ಗೂಳಿಯೊಂದು ಸಮಾವೇಶದ ಸ್ಥಳಕ್ಕೆ ಇದ್ದಕ್ಕಿದ್ದಂತೆ ನುಗ್ಗಿ ಅವಾಂತರ ಸೃಷ್ಠಿಸಿತ್ತು.
ರ‍್ಯಾಲಿಗೆ ನುಗ್ಗಿದ ಗೂಳಿ
ಈ ನಡುವೆ ರ‍್ಯಾಲಿಗೆ ಅಖಿಲೇಶ್ ಯಾದವ್ ಆಗಮನಕ್ಕೂ ಮುನ್ನ ಗೂಳಿಯೊಂದು ಸಮಾವೇಶದ ಸ್ಥಳಕ್ಕೆ ಇದ್ದಕ್ಕಿದ್ದಂತೆ ನುಗ್ಗಿ ಭಾರಿ ಸಂಖ್ಯೆಯಲ್ಲಿ ನೆರದಿದ್ದ ಜನ ಜಂಗಳಿಯ ಮಧ್ಯೆ ಓಟಕ್ಕೆ ನಿಂತು ಬಿಟ್ಟಿತ್ತು. ಗೂಳಿ ಹಠಾತ್ ಓಟಕ್ಕೆ ಸೇರಿದ್ದ ಜನ ದಿಕ್ಕಾಪಾಲಾದರು.
ತಕ್ಷಣವೇ ಅಲ್ಲೇ ಇದ್ದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಗೂಳಿ ಓಡಿಸಲು ಹರಸಾಹಸ ಪಟ್ಟರು. ಇನ್ನು ಅಖಿಲೇಶ್ ಯಾದವ್ ಈ ಗೂಳಿಯನ್ನೇ ಉದಾಹರಣೆ ನೀಡಿ ದಿಲ್ಲಿ ಸರ್ಕಾರ ಬದಲಾಯಿಸುವ ಡೈಲಾಗ್ ಹೊಡೆದರು.. ಗೂಳಿಯ ಆತಂಕದ ನಡುವೆ, ಜನ ಅಖಿಲೇಶ್ ಯಾದವ್ ಡೈಲಾಗ್ಗೆ ಸಿಳ್ಳೆ - ಕೇಕೆ ಹೊಡೆದರು.