ಕರ್ನಾಟಕ

karnataka

ETV Bharat / bharat

ಟ್ಯೂಷನ್​ಗೆ ಬರುತ್ತಿದ್ದ 8 ವರ್ಷದ ಬಾಲಕನಿಗೆ ಲೇಡಿ ​ಟೀಚರ್ ಲೈಂಗಿಕ ಕಿರುಕುಳ!! - ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ

ಕಳೆದ ಒಂದು ವರ್ಷದಿಂದ ಹುಡುಗನ ತಾಯಿ, ತನ್ನ ಮಗನ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ..

abuse
ಲೈಂಗಿಕ ಕಿರುಕುಳ

By

Published : Oct 6, 2020, 4:05 PM IST

ಬುಲಂದ್​ಶಹರ್/ಉತ್ತರಪ್ರದೇಶ​​ :ತನ್ನ ಬಳಿ ಟ್ಯೂಷನ್​ಗೆ ಬರುತ್ತಿದ್ದ 8 ವರ್ಷದ ಬಾಲಕನಿಗ ಶಿಕ್ಷಕಿ ಮತ್ತು ಬರುವ ಔಷಧಿ ನೀಡಿ ಲೈಂಗಿಕವಾಗಿ ಆತನನ್ನು ಬಳಸಿಕೊಂಡಿದ್ದಾರೆ ಎಂದು ಬಾಲಕನ ತಾಯಿ ಆರೋಪ ಮಾಡಿದ್ದಾರೆ.

ಸಂತ್ರಸ್ತ ಬಾಲಕ ಬುಲಂದ್​ಶಹರ್​ನ ಯಮುನಾಪುರಂ ನಿವಾಸಿಯಾಗಿದ್ದು, ದಿನೇದಿನೆ ಮಗನ ಆರೋಗ್ಯ ಹದಗೆಡುತ್ತಿರೋದನ್ನು ಗಮನಿಸಿದ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕಳೆದ ಒಂದು ವರ್ಷದಿಂದ ಹುಡುಗನ ತಾಯಿ ಮಗನ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗಕ್ಕೆ ಕೂಡ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರಪ್ರದೇಶ ಮಕ್ಕಳ ರಕ್ಷಣಾ ಆಯೋಗದ ಸದಸ್ಯೆ ಪ್ರೀತಿ ವರ್ಮಾ, ಈ ಪ್ರಕರಣದ ಗಂಭೀರ ತನಿಖೆ ನಡೆಸಬೇಕಿದೆ. ಹೀಗಾಗಿ, ನಾನು ಸಂತ್ರಸ್ತರ ಕುಟುಂಬಸ್ಥರನ್ನ ಭೇಟಿ ಮಾಡುವ ಮೂಲಕ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದೇನೆ ಎಂದು ಹೇಳಿದ್ದಾರೆ.

ಇದೇ ವೇಳೆ ಪ್ರೀತಿ ವರ್ಮಾ ಅವರು ಘಟನೆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ ಹಾಗೂ ಪ್ರಕರಣವನ್ನ ಶೀಘ್ರ ತನಿಖೆ ಮಾಡಬೇಕು ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದಾರೆ.

ABOUT THE AUTHOR

...view details