ಸೂರತ್: ಬಹುಮಹಡಿ ಕಟ್ಟಡ ಕುಸಿದು ಮೂವರು ಮೃತಪಟ್ಟಿರುವ ಘಟನೆ ಗುಜರಾತ್ನ ಸೂರತ್ನಲ್ಲಿ ಇಂದು ಬೆಳಗ್ಗೆ ನಡೆದಿದೆ.
ಸೂರತ್ನಲ್ಲಿ ಬಹುಮಹಡಿ ಕಟ್ಟಡ ಕುಸಿತ: ಮೂವರ ದುರ್ಮರಣ - ಗುಜರಾತ್ನ ಸೂರತ್
ಸೂರತ್ನ ರಾಂಡರ್ ರಸ್ತೆ ಬಳಿ ಇರುವ ಅತಿ ಹಳೆಯದಾದ ಬಹುಮಹಡಿ ಕಟ್ಟಡ ಕುಸಿದು ಮೂವರು ಸಾವನ್ನಪ್ಪಿದ್ದಾರೆ.
ಸೂರತ್ನಲ್ಲಿ ಬಹುಮಹಡಿ ಕಟ್ಟಡ ಕುಸಿತ
ಸೂರತ್ನ ರಾಂಡರ್ ರಸ್ತೆ ಬಳಿ ಇರುವ ಅತಿ ಹಳೆಯ ಕಟ್ಟಡ ಇದಾಗಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಮೃತರನ್ನು ಅನಿಲ್ ನೇಪಾಳಿ, ಜಗದೀಶ್ ಚೌಹಾನ್, ಮತ್ತು ರಾಜು ಮಾರ್ವಾಡಿ ಎಂದು ಗುರುತಿಸಲಾಗಿದೆ.
ಕಳೆದ ರಾತ್ರಿಯಿಂದ ಜೋರಾಗಿ ಮಳೆ ಸುರಿದಿದ್ದು, ಕಟ್ಟಡದ ಒಂದು ಭಾಗ ಕುಸಿದಿದೆ. ಅತಿ ಹಳೆಯ ಕಟ್ಟಡವಾಗಿದ್ದರಿಂದ ಈ ಹಿಂದೆ ಅನೇಕ ಬಾರಿ ಮಹಾನಗರ ಪಾಲಿಕೆ ಕಟ್ಟಡದ ಮಾಲೀಕರಿಗೆ ನೋಟಿಸ್ ನೀಡಿದ್ದರು. ಇದೀಗ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Last Updated : Sep 22, 2020, 1:20 PM IST