ಭೋಪಾಲ್ (ಮಧ್ಯಪ್ರದೇಶ): 150 ವರ್ಷ ಹಳೆಯದಾದ ಕಟ್ಟಡ ಕುಸಿದು ಹಲವು ವಾಹನಗಳಿಗೆ ಹಾನಿಯಾದ ಘಟನೆ ಭೋಪಾಲ್‌ನ ಮೋತಿಮಹಲ್ ಸದರ್ ದೇವಸ್ಥಾನದ ಪಾರ್ಕಿಂಗ್ ಸ್ಥಳದಲ್ಲಿ ನಡೆದಿದೆ.
150 ವರ್ಷದ ಹಳೆಯ ಕಟ್ಟಡ ಕುಸಿತ: ಹಲವು ವಾಹನಗಳು ಜಖಂ - ಎಸ್‌ಡಿಆರ್‌ಎಫ್ ತಂಡ
150 ವರ್ಷ ಹಳೆದಾದ ಕಟ್ಟಡ ಕುಸಿದು ಹಲವಾರು ವಾಹನಗಳಿಗೆ ಹಾನಿಯಾದ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ.
150 ವರ್ಷ ಹಳೆಯ ಕಟ್ಟಡ ಕುಸಿತ
ಸ್ಥಳಕ್ಕೆ ಎಸ್‌ಡಿಆರ್‌ಎಫ್ ತಂಡ ಆಗಮಿಸಿದ್ದು, ವಾಹನಗಳ ತೆರವು ಕಾರ್ಯಾಚರಣೆ ನಡೆಸಿದೆ. ಈ ಪ್ರದೇಶದಲ್ಲಿ ನಿಲ್ಲಿಸಿದ್ದ ಸುಮಾರು ಆರು ವಾಹನಗಳು ಮಣ್ಣಿನಡಿ ಹೂತುಹೋಗಿವೆ. ಇಲ್ಲಿ ಪಾರ್ಕಿಂಗ್ ಮಾಡಬೇಕಾದರೆ ಸುಮಾರು 1,000 ರೂ. ನಿಂದ 1,200 ರೂ. ಗಳವರೆಗೆ ಶುಲ್ಕ ವಸೂಲಿ ಮಾಡುತ್ತಾರೆ. ಆದರೆ ರಶೀದಿ ನೀಡುವುದಿಲ್ಲ ಎಂದು ಜನರು ಆರೋಪಿಸಿದ್ದಾರೆ.
ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.