ನವದೆಹಲಿ:ಸಂಸತ್ತಿನಲ್ಲಿ ಬಜೆಟ್ ಅಧಿವೇಶನದ ದ್ವಿತೀಯಾರ್ಧ ಇಂದಿನಿಂದ ಆರಂಭಗೊಳ್ಳಲಿದ್ದು, ಹೊತ್ತಿ ಉರಿದಿರುವ ದೆಹಲಿ ಹಿಂಸಾಚಾರ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ವಿರೋಧ ಪಕ್ಷಗಳು ಸನ್ನದ್ಧವಾಗಿವೆ.
ಬಜೆಟ್ ಅಧಿವೇಶನದ ದ್ವಿತಿಯಾರ್ಧ ಆರಂಭ: ದೆಹಲಿ ಹಿಂಸಾಚಾರ ವಿಚಾರ ಪ್ರತಿಧ್ವನಿಸುವ ಸಾಧ್ಯತೆ - ಕೇಂದ್ರ ಸರ್ಕಾರ
ಸಂಸತ್ತಿನಲ್ಲಿ ಇಂದಿನಿಂದ ಬಜೆಟ್ ಅಧಿವೇಶನದ ದ್ವಿತಿಯಾರ್ಧ ಆರಂಭಗೊಳ್ಳಲಿದ್ದು, ದೆಹಲಿ ಹಿಂಸಾಚಾರ ವಿಷಯವನ್ನಿಟ್ಟುಕೊಂಡು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಲು ಸನ್ನದ್ಧಗೊಂಡಿವೆ.
ದೆಹಲಿ ಹಿಂಸಾಚಾರದಲ್ಲಿ 42 ಜನರ ಸಾವು, ವಾಹನ, ಮನೆ, ಶಾಲೆಗಳಿಗೆ ಬೆಂಕಿ ಹಚ್ಚಿರುವ ಪರಿಣಾಮ ಅಪಾರ ಪ್ರಮಾಣದ ನಷ್ಟವಾಗಿದ್ದು, ಇದೇ ವಿಷಯವನ್ನಿಟ್ಟುಕೊಂಡು ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸುವ ಸಾಧ್ಯತೆ ದಟ್ಟವಾಗಿದೆ. ಬಜೆಟ್ ಅಧಿವೇಶನದ ಮೊದಲ ಭಾಗವು ಜನವರಿ 31ರಿಂದ ಫೆಬ್ರವರಿ 11ರವರೆಗೆ ನಡೆದಿತ್ತು. ಹಣಕಾಸು ಮಸೂದೆ - 2020, ವಿಮಾನ(ತಿದ್ದುಪಡಿ) ವಿಧೇಯಕ ಮತ್ತು ನೇರ ತೆರಿಗೆ ’ವಿವಿಧ್ ಸೆ ವಿಶ್ವಾಸ್’ ಎಂಬ ವಿಧೇಯಕಗಳನ್ನ ಮಂಡಿಸಲಾಗಿತ್ತು. ಮುಂದುವರಿದ ಅಧಿವೇಶನವು ಏ.3ರವರೆಗೆ ನಡೆಯಲಿದೆ.
ಪ್ರಮುಖವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿ ಹಿಂಸಾಚಾರದ ಬಗ್ಗೆ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡುವುದಾಗಿ ಹೇಳಿದ್ದು, ನಿನ್ನೆ ಸಂಜೆ ಕಾಂಗ್ರೆಸ್ ಸಂಸದರೊಂದಿಗೆ ಚರ್ಚೆ ಸಹ ನಡೆಸಿದ್ದಾರೆ. ಇದರ ಜತೆಗೆ ದೇಶದಲ್ಲಿನ ಆರ್ಥಿಕ ಕುಸಿತ, ನಿರುದ್ಯೋಗ ಸಮಸ್ಯೆ, ಮಹಿಳೆಯರ ಮೇಲಿನ ಅತ್ಯಾಚಾರ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸುವ ಸಾಧ್ಯತೆ ದಟ್ಟವಾಗಿದೆ. ಈ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಬಾಡಿಗೆ ತಾಯ್ತನ, ವಿವಾದಿತ ತೆರಿಗೆ ಸುಧಾರಣೆ ಸೇರಿದಂತೆ ಹಲವು ಮುಖ್ಯ ವಿಧೇಯಕಗಳನ್ನ ಮಂಡಿಸಿ ಸದನದ ಒಪ್ಪಿಗೆ ಪಡೆಯಲು ಉದ್ದೇಶಿಸಿದೆ.