ಕರ್ನಾಟಕ

karnataka

ETV Bharat / bharat

ಬಜೆಟ್​ 2021: ಆದಷ್ಟು ಬೇಗ ರೈಲಿನಲ್ಲಿ ಸಿಗಲಿದೆ ‘ರೆಡಿ ಟು ಮಿಲ್ಸ್​’ ಸೌಲಭ್ಯ! - ಬಜೆಟ್​ 2021 ಸುದ್ದಿ

ಈ ಬಾರಿ ಬಜೆಟ್​ನಲ್ಲಿ ರೈಲ್ವೆ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಗುಡ್​ ನ್ಯೂಸ್​ ನೀಡಲಿದೆ. ಆದಷ್ಟು ಬೇಗ ಚಲಿಸುವ ರೈಲಿನಲ್ಲಿ ರೆಡಿ ಟು ಮಿಲ್ಸ್​ ಸೌಲಭ್ಯ ದೊರೆಯಲಿದೆ.

ready to eat meals, branded ready to eat meals, branded ready to eat meals during train journeys, ready to eat meals  news, IRCTC news, Budget 2021, Budget 2021 news, ರೆಡಿ ಟು ಈಟ್​ ಮಿಲ್ಸ್​, ಬ್ರಾಂಡೆಡ್​ ರೆಡಿ ಟು ಈಟ್​ ಮಿಲ್ಸ್​, ರೈಲಿನ ಪ್ರಯಾಣದ ವೇಳೆ ಬ್ರಾಂಡೆಡ್​ ರೆಡಿ ಟು ಈಟ್​ ಮಿಲ್ಸ್​, ರೆಡಿ ಟು ಈಟ್​ ಮಿಲ್ಸ್​ ಸುದ್ದಿ, ಐಆರ್​​ಸಿಟಿಸಿ ಸುದ್ದಿ, ಬಜೆಟ್​ 2021, ಬಜೆಟ್​ 2021 ಸುದ್ದಿ,
ಸಂಗ್ರಹ ಚಿತ್ರ

By

Published : Jan 20, 2021, 6:52 AM IST

ನವದೆಹಲಿ:ರೈಲ್ವೆ ಪ್ರಯಾಣಿಕರಿಗೆ ಹೆಚ್ಚಿನ ಸೇವೆಗಳನ್ನು ಲಭ್ಯಗೊಳಿಸುವ ಮೂಲಕ ಆದಾಯ ಹೆಚ್ಚಿಸಲು ಐಆರ್‌ಸಿಟಿಸಿ ಪ್ರಣಾಳಿಕೆ ರಚಿಸುತ್ತಿದೆ. ಈ ಕ್ರಮದಲ್ಲಿ ಪ್ರಯಾಣಿಕರಿಗೆ ಚಲಿಸುವ ರೈಲಿನಲ್ಲಿ ರೆಡಿ ಟು ಮಿಲ್ಸ್​ ನೀಡಲು ಸಿದ್ಧತೆ ನಡೆಸಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಈಗಾಗಲೇ ರೆಡಿ ಟು ಮಿಲ್ಸ್​ ಯೋಜನೆಗಾಗಿ ರೈಲ್ವೇ ಇಲಾಖೆ ಪ್ರಮುಖ ಆಹಾರ ಕಂಪನಿಗಳಾದ ಹಲ್ದಿರಾಮ್ಸ್, ಐಟಿಸಿ, ಎಂಟಿಆರ್ ಮತ್ತು ವಾಘಬಕ್ರಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಮುಂಬರುವ ಬಜೆಟ್‌ನಲ್ಲಿ ಕೇಂದ್ರವು ಈ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಸೇವೆಗಳನ್ನು ಆದಷ್ಟು ಬೇಗನೆ ಬೆಳಕಿಗೆ ತರುವ ಮೂಲಕ ಕೊರೊನಾ ಸಮಯದಲ್ಲಿ ರೈಲ್ವೇ ಇಲಾಖೆಗೆ ಆದ ನಷ್ಟವನ್ನು ಸರಿದೂಗಿಸಲು ಕೇಂದ್ರ ಆಶಿಸಿದೆ.

ಪ್ರಮುಖ ಆಹಾರ ಕಂಪನಿಗಳೊಂದಿಗೆ ಸೇವೆ ಸಲ್ಲಿಸುವ ಮೂಲಕ ಪ್ರಯಾಣಿಕರನ್ನು ಆಕರ್ಷಿಸಲು ಮತ್ತು ನಷ್ಟವನ್ನು ಸರಿಪಡಿಸಿಕೊಳ್ಳಲು ಈ ಹೊಸ ಯೋಜನೆಗಳನ್ನು ಕೈಗೊಳ್ಳಲು ರೆಡಿ ಟು ಮಿಲ್ಸ್​ ಯೋಜನೆಗೆ ರೈಲ್ವೇ ಇಲಾಖೆ ತಯಾರಿ ನಡೆಸುತ್ತಿದೆ. ಈ ಯೋಜನೆಯ ನೀತಿಯನ್ನು ಈಗಾಗಲೇ ವಿಮಾನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದರಿಂದ ಆಯಾ ವಿಮಾನಯಾನ ಸಂಸ್ಥೆಗಳು ಉತ್ತಮ ಲಾಭ ಗಳಿಸುತ್ತಿವೆ. ಇದರೊಂದಿಗೆ ರೈಲ್ವೆಯಲ್ಲೂ ಇದೇ ನೀತಿಯನ್ನು ಜಾರಿಗೆ ತರಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಈ ನಿಟ್ಟಿನಲ್ಲಿ ಆಹಾರ ಕ್ಷೇತ್ರದ ಪ್ರಮುಖ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ABOUT THE AUTHOR

...view details