ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2020ರ ಬಜೆಟ್‌ನಲ್ಲಿ ಜನ ಆರೋಗ್ಯ ಯೋಜನೆಗೆ 6,400 ಕೋಟಿ ರೂಪಾಯಿ ಒಳಗೊಂಡಂತೆ 69,000 ಕೋಟಿ ರೂಪಾಯಿಗಳನ್ನು ಆರೋಗ್ಯ ರಕ್ಷಣೆಗೆಂದು ಮೀಸಲಿಟ್ಟಿದ್ದಾರೆ. ಇದು ಕಳೆದ ವರ್ಷ ಅವರು ಆರೋಗ್ಯ ಇಲಾಖೆಗೆ ಮೀಸಲಿಟ್ಟಿದ್ದ 62,659 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಅನುದಾನವಾಗಿದೆ.
ಆರೋಗ್ಯ ಇಲಾಖೆಗೆ ಗಮನಾರ್ಹ ಮೊತ್ತ ಮೀಸಲು: ಕ್ಷಯ ರೋಗ ನಿರ್ಮೂಲನೆಗೆ ಅಧಿಕ ಒತ್ತು - ಬಜೆಟ್ 2020 ಭಾರತ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2020ರ ಬಜೆಟ್‌ನಲ್ಲಿ ಜನ ಆರೋಗ್ಯ ಯೋಜನೆಗೆ 6,400 ಕೋಟಿ ರೂಪಾಯಿಗಳು ಒಳಗೊಂಡಂತೆ 69,000 ಕೋಟಿ ರೂಪಾಯಿಗಳನ್ನು ಆರೋಗ್ಯ ರಕ್ಷಣೆಗೆಂದು ಮೀಸಲಿಟ್ಟಿದ್ದಾರೆ. ಇದು ಕಳೆದ ವರ್ಷ ಅವರು ಆರೋಗ್ಯ ಇಲಾಖೆಗೆ ಮೀಸಲಿಟ್ಟಿದ್ದ 62,659 ಕೋಟಿ ರೂಪಾಯಿಗಿಂತಲೂ ಗಮನಾರ್ಹ ಏರಿಕೆಯಾಗಿದೆ.
ಇನ್ನು ಆಯಷ್ಮಾನ್ ಪಟ್ಟಿಗೆ ದಾಖಲಾಗದ ಮಹತ್ವಾಕಾಂಕ್ಷಿ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಶ್ರೇಣಿ 2 ಮತ್ತು ಶ್ರೇಣಿ 3ರ ನಗರಗಳಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ತೆರೆಯಲಿದೆ. ಅಂದರೆ, ಒಟ್ಟು 112 ಜಿಲ್ಲೆಗಳಲ್ಲಿ ಆಯುಷ್ಮಾನ್ ಆಸ್ಪತ್ರೆ ಆರಂಭಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಜೊತೆಗೆ, ವೈದ್ಯಕೀಯ ಸಾಧನಗಳ ಮೇಲಿನ ತೆರಿಗೆಯಿಂದ ಬರುವ ಆದಾಯವನ್ನು ಇದೇ ಜಿಲ್ಲೆಗಳ ಆರೋಗ್ಯಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳಿಗಾಗಿ ಬಳಸಲಾಗುವುದು ಎಂದು ಹಣಕಾಸು ಸಚಿವೆ ಸೀತಾರಾಮನ್ ಘೋಷಿಸಿದರು.
ಇದೇ ವೇಳೆ ಅವರು ಕ್ಷಯ ರೋಗದ ನಿರ್ಮೂಲನೆಗೆ ಪಣ ತೊಡುವ ಸಲುವಾಗಿ ಹೊಸ ಅಭಿಯಾನಕ್ಕೆ ಮುನ್ನುಡಿ ಬರೆದರು. ಜೊತೆಗೆ ಎಲ್ಲ ಜಿಲ್ಲೆಗಳಲ್ಲೂ ಜನೌಷಧಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.