ನವದೆಹಲಿ: ಎರಡನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದ ಪ್ರಧಾನಿ ಮೋದಿ ಸರ್ಕಾರ ಇಂದು ತನ್ನ ಎರಡನೇ ಬಜೆಟ್ ಮಂಡಿಸುತ್ತಿದೆ. ಈ ವೇಳೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜಿಎಸ್ಟಿಯ ಕುರಿತು ಹಲವು ಅಂಶಗಳನ್ನು ಸದನದ ಮುಂದಿಟ್ಟಿದ್ದಾರೆ.
ಕಡಿಮೆಯಾದ ಜಿಎಸ್ಟಿ ದರಗಳ ಕಾರಣದಿಂದ ದೇಶದಲ್ಲಿ ಕುಟುಂಬವೊಂದು ಈಗ ತನ್ನ ಮಾಸಿಕ ಖರ್ಚಿನ ಸುಮಾರು ಶೇ.4 ರಷ್ಟನ್ನು ಉಳಿತಾಯ ಮಾಡಬಹುದಾಗಿದೆ. ಜಿಎಸ್ಟಿ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ದಕ್ಷತೆಯ ಲಾಭವನ್ನು ಗಳಿಸಿದೆ. ಜಿಎಸ್‌ಟಿಯಿಂದ ಗ್ರಾಹಕರಿಗೆ ವಾರ್ಷಿಕ 1 ಲಕ್ಷ ಕೋಟಿ ರೂಪಾಯಿ ಲಾಭವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಜಿಎಸ್ಟಿ ದೇಶವನ್ನು ಆರ್ಥಿಕವಾಗಿ ಸಂಯೋಜಿಸಿದೆ ಜಿಎಸ್ಟಿ ದೇಶವನ್ನು ಆರ್ಥಿಕವಾಗಿ ಸಂಯೋಜಿಸಿದೆ. ಜಿಎಸ್‌ಟಿಯಿಂದಾಗಿ ಟ್ರಕ್ ಮತ್ತು ಲಾಜಿಸ್ಟಿಕ್ಸ್ ವಹಿವಾಟು ಶೇ20 ರಷ್ಟು ಕಡಿಮೆಯಾಗಿದೆ. 2006-2016ರ ನಡುವೆ 271 ಮಿಲಿಯನ್ ಜನರನ್ನು ಬಡತನ ರೇಖೆಯಿಂದ ಮೇಲೆತರಲಾಗಿದೆ. ನಾವು ಈಗ ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ ಎಂದರು.
‘ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ್’ ಗಳಿಂದ ಮಾರ್ಗದರ್ಶಿಸಲ್ಪಟ್ಟ ನಾವು ಬಡವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಿದ್ದೇವೆ. ನೇರ ಲಾಭ ಯೋಜನೆ, ಆಯುಷ್ಮಾನ್ ಭಾರತ್, ಉಜ್ವಾಲ್ ಯೋಜನೆ, ಸಾಲ ಬೆಂಬಲ, ಡಿಜಿಟಲ್ ನುಗ್ಗುವಿಕೆ ಮತ್ತು ಕೈಗೆಟುಕುವ ವಸತಿಯಂತಹ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜಿಎಸ್ಟಿ ಕೌನ್ಸಿಲ್ ಪೂರ್ವಭಾವಿಯಾಗಿ ಕಾರ್ಯನಿರ್ವಹಿಸುತ್ತಿದೆ. ನಾವು 15 ಲಕ್ಷ ಹೊಸ ತೆರಿಗೆ ಪಾವತಿದಾರರನ್ನು ಸೇರಿಸಿದ್ದೇವೆ ಎಂದು ಹಣಕಾಸು ಸಚಿವೆ ತಮ್ಮ ಬಜೆಟ್ ಮಂಡನೆಯಲ್ಲಿ ತಿಳಿಸಿದರು.