ಕರ್ನಾಟಕ

karnataka

ETV Bharat / bharat

ಬಿಜೆಪಿಗೆ ಮತ ಹಾಕಿದ್ರೆ ಮಹಾರಾಷ್ಟ್ರ ಜನರಿಗೆ ಕರ್ನಾಟಕದಿಂದ ನೀರು: ಯಡಿಯೂರಪ್ಪ ಭರವಸೆ - ಕೃಷ್ಣಾ ನದಿ

ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಈಗಾಗಲೇ ಭುಗಿಲೆದ್ದಿರುವ ಕೃಷ್ಣಾ ನದಿ ನೀರು ಹಂಚಿಕೆ ಪ್ರಕರಣವೇ ಇತ್ಯರ್ಥವಾಗಿಲ್ಲ. ಹೀಗಿರುವಾಗ ವೋಟಿಗಾಗಿ ಅಲ್ಲಿನ ಜನರ ವೋಲೈಕೆಗೆ ಬಿಎಸ್​ವೈ ಮುಂದಾಗಿದ್ದಾರೆ. ಮಹದಾಯಿ ಹಾಗೂ ಕೃಷ್ಣಾ ನದಿ ನೀರು ಹಂಚಿಕೆ ವಿವಾದ ಇರುವಾಗಲೇ ಕರ್ನಾಟಕದ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯ ನೀರನ್ನ ಬೋರಾ ನದಿಗೆ ಹರಿಸಲು ಬಿಎಸ್​ವೈ ಚಿಂತನೆ ನಡೆಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ

By

Published : Oct 17, 2019, 11:59 AM IST

Updated : Oct 17, 2019, 3:26 PM IST

ಜತ್​(ಮಹಾರಾಷ್ಟ್ರ):ಮಹಾರಾಷ್ಟ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಲುವಾಗಿ ನೀರಾವರಿ ಯೋಜನೆಗಳ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಅಲ್ಲಿನ ಜನರಿಗೆ ಹಲವು ಆಶ್ವಾಸನೆಗಳನ್ನ ನೀಡುತ್ತಿದ್ದಾರೆ.

ಮೀರಜ್​ ಜಿಲ್ಲೆಯ ಜತ್​ನಲ್ಲಿ ಚುನಾವಣಾ ಪ್ರಚಾರ ನಡೆಸಿದ ವೇಳೆ ಯಡಿಯೂರಪ್ಪ ಅವರು ಮತದಾರರಿಗೆ ಈ ಭರವಸೆ ನೀಡಿದ್ದಾರೆ. ಬಿ.ಎಸ್.​ ಯಡಿಯೂರಪ್ಪ ಅಧಿಕಾರಕ್ಕೆ ಬಂದ 15 ದಿನಗಳಲ್ಲೇ ಮಹದಾಯಿ ವಿವಾದಕ್ಕೆ ತೆರೆ ಎಳೆಯುವುದಾಗಿ ಭರವಸೆ ನೀಡಿದ್ದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದು 3 ತಿಂಗಳು ಕಳೆದರೂ ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಬಾಯ್ಬಿಟ್ಟಿಲ್ಲ.

ಮಹಾರಾಷ್ಟ್ರದಲ್ಲೂ ನಿಲ್ಲದ ಬಿಎಸ್​ವೈ ಪೊಳ್ಳು ಆಶ್ವಾಸನೆ..?

ಇನ್ನು, ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಈಗಾಗಲೇ ಭುಗಿಲೆದ್ದಿರುವ ಕೃಷ್ಣಾ ನದಿ ನೀರು ಹಂಚಿಕೆ ಪ್ರಕರಣವೇ ಇತ್ಯರ್ಥವಾಗಿಲ್ಲ. ಹೀಗಿರುವಾಗ ವೋಟಿಗಾಗಿ ಮಹಾ ಜನರ ವೋಲೈಕೆಯಲ್ಲಿ ಬಿಎಸ್​ವೈ ತೊಡಗಿದ್ದಾರೆ. ಮಹದಾಯಿ ಹಾಗೂ ಕೃಷ್ಣಾ ನದಿ ನೀರು ಹಂಚಿಕೆ ವಿವಾದ ಹಸಿಯಾಗಿರುವ ಬೆನ್ನಲ್ಲೇ ಕರ್ನಾಟಕದ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯ ನೀರನ್ನ ಮಹಾರಾಷ್ಟ್ರದ ಬೋರಾ ನದಿಗೆ ಹರಿಸಲು ಬಿಎಸ್​ವೈ ಚಿಂತನೆ ನಡೆಸಿದ್ದಾರೆ. ರಾಜ್ಯದ ಜನರ ಹಿತಕ್ಕಿಂತ ಪಕ್ಷ ಮತ್ತು ಅವರ ಅಭ್ಯರ್ಥಿಗಳ ಗೆಲುವೇ ಬಿಎಸ್​ವೈಗೆ ಮುಖ್ಯವಾಯ್ತಾ ಎಂಬ ಪ್ರಶ್ನೆಗಳು ರಾಜ್ಯದಲ್ಲಿ ವ್ಯಕ್ತವಾಗಿವೆ.

Last Updated : Oct 17, 2019, 3:26 PM IST

ABOUT THE AUTHOR

...view details