ನವದೆಹಲಿ: 2019 ರ ಲೋಕಸಭಾ ಚುನಾವಣೆಯಲ್ಲಿ ನಿಲ್ಲಲು ಮುಕ್ತವಾಗಿದೆ. 80 ಸ್ಥಾನಗಳಲ್ಲೂ ಆ ಪಕ್ಷ ಚುನಾವಣೆ ಎದುರಿಸಲು ಮುಕ್ತವಾಗಿದೆ. ನಮ್ಮದೇನಿದ್ದರೂ ಎಸ್ಪಿ ಜತೆ ಮಾತ್ರವೇ ಹೊಂದಾಣಿಕೆ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಪ್ರಕಟಿಸಿದ್ದಾರೆ.
80 ಸ್ಥಾನಗಳಲ್ಲಿ ಮುಕ್ತವಾಗಿ ಸ್ಪರ್ಧೆ ಮಾಡಲಿ; ನಮ್ಮದೇನಿದ್ದರೂ ಎಸ್ಪಿ ಜತೆ ಹೊಂದಾಣಿಕೆ: ಕಾಂಗ್ರೆಸ್ಗೆ ಮಾಯಾ ಟಾಂಗ್
ಕಾಂಗ್ರೆಸ್ ಜತೆಗಿನ ಮೈತ್ರಿ ಮಾತುಕತೆ ಕುರಿತಂತೆ ಮಾತನಾಡಿದ ಅವರು, ಬಿಜೆಪಿಯನ್ನ ಸೋಲಿಸಲು ಬಹುಜನ ಸಮಾಜವಾದಿ ಪಕ್ಷ ಸಮಾಜವಾದಿ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ಆರ್ಎಲ್ಡಿಗೆ 7 ಸ್ಥಾನಗಳನ್ನ ಬಿಟ್ಟುಕೊಟ್ಟಿದ್ದನ್ನೇ ಇಟ್ಟುಕೊಂಡು ಅಪಾರ್ಥದ ಪ್ರಚಾರ ಮಾಡಬಾರದು ಎಂದು ಕಾಂಗ್ರೆಸ್ಗೆ ನೇರವಾದ ಎಚ್ಚರಿಕೆಯನ್ನ ಮಾಯಾವತಿ ನೀಡಿದ್ದಾರೆ.

ಅಮೇಥಿ ಮತ್ತು ರಾಯಬರೇಲಿ ಹೊರತು ಪಡಿಸಿ ಉಳಿದ ಎಲ್ಲ ಕಡೆ ಸಮಾಜವಾದಿ ಹಾಗೂ ಎಸ್ಪಿ ಅಭ್ಯರ್ಥಿಗಳನ್ನ ನಿಲ್ಲಿಸುವುದಾಗಿ ಘೋಷಿಸಿತ್ತು. ಆದರೆ, ಕಾಂಗ್ರೆಸ್ ಜತೆ ಹೊಂದಾಣಿಕೆ ಇಲ್ಲ ಎಂದೂ ಹೇಳಿತ್ತು. ಅಖಿಲೇಶ್ ಯಾದವ್ ಕಾಂಗ್ರೆಸ್ ಜತೆ ಮೈತ್ರಿಗೆ ಒಲವು ವ್ಯಕ್ತಪಡಿಸಿದ್ದರು. ಮಾಯಾವತಿ ಮಾತ್ರ ಕಾಂಗ್ರೆಸ್ ಜತೆ ಹೊಂದಾಣಿಕೆಯ ಮಾತು ಅಸಾಧ್ಯ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ.