ನವದೆಹಲಿ: ಮಹಾಘಟಬಂಧನದಿಂದ ಹೊರಬಂದು ಬಿಜೆಪಿ-ಕಾಂಗ್ರೆಸ್ ಜತೆ ಸೆಣಸಾಡಲು ಸಿದ್ಧವಾಗಿರುವ ಎಸ್ಪಿ-ಬಿಎಸ್ಪಿ ಉತ್ತರಪ್ರದೇಶದಲ್ಲಿ ತಾವು ಹಂಚಿಕೊಂಡಿರುವ ಸ್ಥಾನಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿವೆ.
ಎಸ್ಪಿಗೆ 37, ಬಿಎಸ್ಪಿಗೆ 38 ಯುಪಿಯಲ್ಲಿ ಸೀಟು ಹಂಚಿಕೊಂಡ ಮಿತ್ರಪಕ್ಷಗಳು - ಉತ್ತರಪ್ರದೇಶ
ಎಸ್ಪಿ-ಬಿಎಸ್ಪಿ ಉತ್ತರಪ್ರದೇಶ ಲೋಕಸಭೆ ಚುನಾವಣೆಗಾಗಿ ಹಂಚಿಕೊಂಡಿರುವ ಸ್ಥಾನಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿವೆ
ಎಸ್ಪಿ-ಬಿಎಸ್ಪಿ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದ 37 ಸ್ಥಾನಗಳಲ್ಲಿ ಅಖಿಲೇಶ್ ನೇತೃತ್ವದ ಸಮಾಜವಾದಿ ಪಕ್ಷ ಸ್ಪರ್ಧಿಸುತ್ತಿದ್ದರೆ, 38 ಸ್ಥಾನಗಳಲ್ಲಿ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷ ಸ್ಪರ್ಧಿಸುತ್ತಿದೆ.
ಪರಸ್ಪರ ಕೈ ಜೋಡಿಸಿ, ಒಕ್ಕೂಟ ಪ್ರಕಟಿಸಿದಾಗಿನಿಂದ ಎರಡೂ ಪಕ್ಷಗಳು ರಾಷ್ಟ್ರೀಯ ಪಕ್ಷಗಳಿಗೆ ಟಾಂಗ್ ನೀಡುತ್ತಲೇ ಬಂದಿವೆ. ಇದೀಗ ಕ್ಷೇತ್ರಗಳ ಹಂಚಿಕೆ ಮೂಲಕ ತಾವು ಚುನಾವಣೆಯನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂಬ ಸಂದೇಶವನ್ನು ಎರಡೂ ಪಕ್ಷಗಳು, ರಾಷ್ಟ್ರೀಯ ಪಕ್ಷಗಳಿಗೆ ರವಾನಿಸಿವೆ.