ಕರ್ನಾಟಕ

karnataka

ETV Bharat / bharat

ಗುಂಡು ಹಾರಿಸಿಕೊಂಡು ಬಿಎಸ್​ಎಫ್​ ಯೋಧ ಆತ್ಮಹತ್ಯೆಗೆ ಶರಣು - ಬಿಎಸ್​ಎಫ್​ ಯೋಧ

ಯೋಧ ಸುರೇಶ್ ಕುಮಾರ್ ತಮ್ಮ ತಂಡದೊಂದಿಗೆ ಕಾರ್ಯಾಚರಣೆಯಿಂದ ಹಿಂದಿರುಗುತ್ತಿದ್ದಾಗ, ಶಿಬಿರಕ್ಕೆ ಕೇವಲ 100 ಮೀಟರ್ ದೂರದಲ್ಲಿ ತನ್ನ ರೈಫಲ್‌ನಿಂದ ಗುಂಡು ಹಾರಿಸಿಕೊಂಡಿದ್ದಾನೆ.

BSF jawan
ಬಿಎಸ್​ಎಫ್​ ಯೋಧ

By

Published : Jun 6, 2020, 9:49 AM IST

ಕಂಕರ್​(ಚತ್ತೀಸ್​ಗಢ್)​:ಜಿಲ್ಲೆಯ ಧುರ್ ನಕ್ಸಲ್ ಪೀಡಿತ ಸಂಗಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ 157 ನೇ ಬೆಟಾಲಿಯನ್‌ನ ಬಿಎಸ್ಎಫ್ ಸೈನಿಕನೋರ್ವ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಧುರ್​ನ ನಕ್ಸಲ್ ಪೀಡಿತ ಸಂಗಂ ಪ್ರದೇಶದಲ್ಲಿ ಘಟನೆ

ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಹರಿಯಾಣದ ನಿವಾಸಿ ಸುರೇಶ್ ಕುಮಾರ್ ತಮ್ಮ ತಂಡದೊಂದಿಗೆ ಕಾರ್ಯಾಚರಣೆಯಿಂದ ಹಿಂದಿರುಗುತ್ತಿದ್ದಾಗ, ಶಿಬಿರಕ್ಕೆ ಕೇವಲ 100 ಮೀಟರ್ ದೂರದಲ್ಲಿ ತನ್ನ ರೈಫಲ್‌ನಿಂದ ಗುಂಡು ಹಾರಿಸಿಕೊಂಡಿದ್ದಾನೆ. ಗುಂಡಿನ ಸದ್ದು ಕೇಳಿ ಸ್ಥಳಕ್ಕೆ ಬಂದ ಜವಾನರು ತಕ್ಷಣ ಗಾಯಾಳುವನ್ನು ಶಿಬಿರಕ್ಕೆ ಕರೆತಂದರು. ಆದರೆ ಆ ಹೊತ್ತಿಗಾಗಲೇ ಅವರು ಮೃತಪಟ್ಟಿದ್ದರು.

ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಬಿಎಸ್ಎಫ್ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಯೋಧನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.

ABOUT THE AUTHOR

...view details