ಕರ್ನಾಟಕ

karnataka

ETV Bharat / bharat

ಬಾಂಗ್ಲಾ ಗಡಿಯಲ್ಲಿ ಬಿಎಸ್​ಎಫ್​ನಿಂದ ಇಬ್ಬರ ಬಂಧನ: ಮಾದಕ ವಸ್ತು ವಶಕ್ಕೆ - ಪಶ್ಚಿಮ ಬಂಗಾಳ ಸುದ್ದಿ

ಪಶ್ಚಿಮ ಬಂಗಾಳದ ಬಾಂಗ್ಲಾ ಗಡಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಬಿಎಸ್​ಎಫ್​ ಸಿಬ್ಬಂದಿ ಬಂಧಿತರಿಂದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

representational image
ಸಾಂದರ್ಭಿಕ ಚಿತ್ರ

By

Published : Sep 21, 2020, 10:13 AM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿ ಮಾದಕ ಅಂಶಗಳನ್ನು ಹೊಂದಿರುವ ಹಾಗೂ ನಿಷೇಧಿಸಲ್ಪಟ್ಟ ಮಾದಕ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಾಂಗ್ಲಾ ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಬಿಎಸ್​ಎಫ್ ಸಿಬ್ಬಂದಿ ಇವರನ್ನು ಸೆರೆ ಹಿಡಿದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಆರೋಪಿಗಳನ್ನು ಸ್ವರೂಪ್​​​ನಗರ ನಿವಾಸಿಗಳಾದ ರಾಹುಲ್ ಮೊಂಡಲ್ ಹಾಗೂ ಫಾರೂಖ್ ಮೊಲ್ಲಾಹ್ ಎಂದು ಗುರುತಿಸಲಾಗಿದೆ. ಇವರ ಬಗ್ಗೆ ರಾಷ್ಟ್ರೀಯ ತನಿಖಾದಳ ಹಾಗೂ ಮಾದಕ ವಸ್ತು ನಿಯಂತ್ರಣ ಮಂಡಳಿಗೆ ಮಾಹಿತಿ ನೀಡಲಾಗಿದೆ.

ಮಾತ್ರೆಗಳ ಜೊತೆಗೆ ಒಂದು ಬೈಕ್ ಅನ್ನು ಕೂಡಾ ವಶಪಡಿಸಿಕೊಳ್ಳಲಾಗಿದ್ದು, ವಿಚಾರಣೆ ಮುಂದುವರೆದಿದೆ.

ABOUT THE AUTHOR

...view details