ಮುಂಬೈ: ಬಾಂಬೆ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 702 ಅಂಶಗಳಷ್ಟು ಅಥವಾ ಶೇ 2.4ರಷ್ಟು ಕುಸಿತ ಕಂಡಿದೆ. ಈ ಮೂಲಕ ಒಟ್ಟು ಸೆನ್ಸೆಕ್ಸ್ 28,750ಕ್ಕೆ ಇಳಿಕೆಯಾಗಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 210 ಪಾಯಿಂಟ್ಗಳಷ್ಟು ಇಳಿಕೆ ಕಂಡಿದ್ದು 8,380 ಮಟ್ಟದಲ್ಲಿದೆ.
ಷೇರುಪೇಟೆಯ ಗೂಳಿಗೆ ಕೊರೊನಾ ಲಗಾಮು: ಕೆಎಂಬಿ,ಎಸ್ಬಿಐ,ಹೆಚ್ಡಿಎಫ್ಸಿ ಬ್ಯಾಂಕುಗಳಿಗೆ ನಷ್ಟ
ಬಾಂಬೆ ಷೇರು ಮಾರುಕಟ್ಟೆ ದಿನದ ಆರಂಭಿಕ ವಹಿವಾಟಿನಲ್ಲಿ ಇಳಿಕೆ ದಾಖಲಿಸಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕ ಸೆನ್ಸೆಕ್ಸ್ 702 ಅಂಶಗಳಷ್ಟು ಅಥವಾ ಶೇ 2.4ರಷ್ಟು ಕುಸಿತ ಕಂಡಿದೆ. ಈ ಮೂಲಕ ಒಟ್ಟು ಸೆನ್ಸೆಕ್ಸ್ 28,750ಕ್ಕೆ ಇಳಿಕೆಯಾಗಿದೆ.
bse Sensex falls 379.61 points
ಕೋಟಕ್ ಮಹೀಂದ್ರಾ ಬ್ಯಾಂಕ್ ಶೇ 8 ರಷ್ಟು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ 4ರಷ್ಟು, ಹೆಚ್ಡಿಎಫ್ಸಿ ಬ್ಯಾಂಕ್ ಶೇ 3ರಷ್ಟು ಹಾಗೂ ಇತರ ಉದ್ಯಮಗಳು ನಷ್ಟಕ್ಕೆ ಒಳಗಾಗಿವೆ. ಇದರ ಜೊತೆಗೆ ಇಂಡಸ್ ಇಂಡ್ ಬ್ಯಾಂಕ್ ಶೇ 9ರಷ್ಟು ಚೇತರಿಕೆ ಕಂಡಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ ಶೇ 3ರಷ್ಟು ಇಳಿಕೆ ಕಂಡಿದೆ. ನವದೆಹಲಿಯಲ್ಲಿರುವ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್ಎಸ್ಇ)ನಿಫ್ಟಿ 61.20 ಅಂಶಗಳಷ್ಟು ಇಳಿಕೆ ಕಂಡಿದ್ದು ಸದ್ಯಕ್ಕೆ 8,536.55 ರಷ್ಟಿದೆ.