ವಿಶಾಖಪಟ್ಟಣಂ (ಆಂಧ್ರಪ್ರದೇಶ): ಆ ಮನೆಯಲ್ಲಿ ಈಗ ಬರೀ ಮೌನ ಆವರಿಸಿದೆ. ತಂದೆಯ ಅಸ್ಥಿ ವಿಸರ್ಜನೆಗೆ ತೆರಳಿದ್ದ ಆ ಸಹೋದರರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಂತಹ ದುರ್ಘಟನೆ ಜಿಲ್ಲೆಯ ರಾವಿಕಮತಂನಲ್ಲಿ ನಡೆದಿದೆ.
ಅಯ್ಯೋ ದುರ್ವಿಧಿಯೇ... ಗಂಡನೊಂದಿಗೆ ಮಕ್ಕಳನ್ನೂ ಕಳೆದುಕೊಂಡ ಮಹಿಳೆ! - ವಿಶಾಖಪಟ್ಟಣ ಸಹೋದರರ ಸಾವು ಸುದ್ದಿ
ತಂದೆಯ ಅಸ್ಥಿ ವಿಸರ್ಜನೆಗೆ ಹೋಗಿ ಅಣ್ತಮ್ಮಂದಿರು ನೀರುಪಾಲಾಗಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.
ತಂದೆ ಅಸ್ಥಿ ವಿಸರ್ಜನೆಗೆ ಹೋಗಿ ಅಣ್ತಂದಿರ ಸಾವು
ಇಲ್ಲಿನ ಕಲ್ಯಾಣ ಜಲಾಶಯದಲ್ಲಿ ತಂದೆಯ ಅಸ್ಥಿ ವಿಸರ್ಜನೆಗಾಗಿ ಬುಚ್ಚಯ್ಯಪೇಟ ಗ್ರಾಮದ ನಿವಾಸಿ ಸೂರಿಶೆಟ್ಟಿ ಮೂರ್ತಿ, ಗೋಪಿ ತೆರಳಿದ್ದರು. ಈ ವೇಳೆ, ಮೂರ್ತಿ ಅಸ್ಥಿ ವಿಸರ್ಜನೆಗೆ ತೆರಳಿದಾಗ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾನೆ. ಗೋಪಿ ಸಹೋದರನನ್ನು ಕಾಪಾಡಲು ತೆರಳಿದ್ದಾನೆ. ಆದ್ರೆ ವಿಧಿ ಆಟಕ್ಕೆ ಸಹೋದರರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಗಂಡನನ್ನು ಕಳೆದುಕೊಂಡು ದುಃಖದಲ್ಲಿದ್ದ ಆ ಮಹಿಳೆಗೆ ಶಾಕ್ ಮೇಲೆ ಶಾಕ್ ಆಗಿದೆ. ಕಣ್ಣೆದುರಿಗೆ ನೀರಿನಲ್ಲಿ ಮುಳುಗಿ ಮಕ್ಕಳು ಮೃತಪಟ್ಟಿರುವುದನ್ನ ಕಂಡು ಆ ತಾಯಿಯ ರೋದನೆ ಮುಗಿಲು ಮುಟ್ಟಿದೆ.