ಪಿಥೋರಗರ್:ಉತ್ತರಾಖಂಡ್ ರಾಜ್ಯದ ಇಂಡೋ-ಚೀನಾ ಗಡಿ ಸಮೀಪವಿರುವ ಲಿಲಾಮ್ ಜೋಹರ್ ಕಣಿವೆಯ ಮುನ್ಸಾರಿ ತಹಸಿಲ್ನ ಧಾಪಾ-ಮಿಲಾಮ್ ರಸ್ತೆಯಲ್ಲಿ ಕುಸಿದು ಬಿದ್ದಿದ್ದ ಸೇತುವೆಯನ್ನು ಮತ್ತೆ ನಿರ್ಮಾಣ ಮಾಡಲಾಗಿದೆ.
ಭಾರತ-ಚೀನಾ ಗಡಿ ಸಮೀಪವಿರುವ ಸೇತುವೆ ಭಾರೀ ನಿರ್ಮಾಣ ಉಪಕರಣಗಳನ್ನು ಹೊತ್ತ ಟ್ರಕ್ ಸಾಗುತ್ತಿದ್ದ ವೇಳೆ ಕುಸಿದು ಬಿದ್ದಿತ್ತು. ಇದೀಗ ಈ ಸೇತುವೆಯನ್ನು ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಕೇವಲ 5 ದಿನಗಳಲ್ಲೇ ಮರು ನಿರ್ಮಾಣ ಮಾಡಿದೆ.
ಉತ್ತರಾಖಂಡ್: ಭಾರತ-ಚೀನಾ ಗಡಿ ಪ್ರದೇಶದ ಬಳಿ ಸೇತುವೆ ಕುಸಿತ... ವಿಡಿಯೋ
ಭಾರತ-ಚೀನಾ ಸಂಘರ್ಷದ ಹಿನ್ನೆಲೆಯಲ್ಲಿ ಸೇತುವೆಯ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಬಿಆರ್‌ಒ ಜೂನ್ 23ರಂದು ಹೊಸ ಸೇತುವೆ ನಿರ್ಮಾಣವನ್ನು ಪ್ರಾರಂಭಿಸಿತು. ಇದೀಗ ಸೇತುವೆ ನಿರ್ಮಾಣ ಕಾರ್ಯ ಪೂರ್ಣವಾಗಿದ್ದು, ವಾಹನಗಳ ಸಂಚಾರಕ್ಕೆ ಶೀಘ್ರದಲ್ಲೇ ಅವಕಾಶ ನೀಡಲಾಗುವುದು ಎಂದು ಬಿಆರ್‌ಒ ಅಧಿಕಾರಿಗಳು ತಿಳಿಸಿದ್ದಾರೆ.
ಸೇತುವೆ ಕುಸಿದಿದ್ದರಿಂದ ಗಡಿ ಪ್ರದೇಶದ ಸುತ್ತಮುತ್ತಲಿನ 12 ಹಳ್ಳಿಗಳ 7 ಸಾವಿರಕ್ಕೂ ಹೆಚ್ಚು ಜನರಿಗೆ ತೊಂದರೆಯಾಗಿತ್ತು. ಸೈನಿಕರು ಮತ್ತು ಐಟಿಬಿಪಿ ಸಿಬ್ಬಂದಿ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು.