ಕರ್ನಾಟಕ

karnataka

ETV Bharat / bharat

ಕ್ವಾರಂಟೈನ್​ ಮುಗಿಸಿದ ಬ್ರಿಟಿಷ್ ಪ್ರಜೆ ಸ್ವದೇಶ ರವಾನೆ - ಬ್ರಿಟಿಷ್ ರಾಯಭಾರ ಕಚೇರಿ

ಕ್ವಾರಂಟೈನ್​ ಅವಧಿ ಮುಗಿಸಿದ ಬ್ರಿಟಿಷ್ ಪ್ರಜೆಯೊಬ್ಬರು ಶುಕ್ರವಾರ ರಾತ್ರಿ ಬ್ರಿಟನ್​ಗೆ ಮರಳಲಿದ್ದಾರೆ. ಯುಕೆಯಲ್ಲಿ ಪ್ರಾಧ್ಯಾಪಕರಾಗಿರುವ ಬ್ರಿಯಾಂಟ್​ ಅವರು ಸ್ವದೇಶಕ್ಕೆ ಮರಳಲು ಬ್ರಿಟಿಷ್ ರಾಯಭಾರ ಕಚೇರಿ ಅನುಮತಿ ನೀಡಿದೆ.

British national to return to UK
British national to return to UK

By

Published : Apr 17, 2020, 7:41 PM IST

ಚಿತ್ತೂರು (ಆಂಧ್ರ ಪ್ರದೇಶ): ತಿರುಚಾನೂರ್​ನ ಪದ್ಮಾವತಿ ನಿಲಯಂನಲ್ಲಿದ್ದು ಕ್ವಾರಂಟೈನ್​ ಅವಧಿ ಮುಗಿಸಿದ ಬ್ರಿಟಿಷ್ ಪ್ರಜೆಯೊಬ್ಬರು ಶುಕ್ರವಾರ ರಾತ್ರಿ ಬ್ರಿಟನ್​ಗೆ ಮರಳಲಿದ್ದಾರೆ. ಕಲ್ಲಿ ಕ್ಲೈವ್ ಬ್ರಿಯಾಂಟ್ ಹೆಸರಿನ ಬ್ರಿಟಿಷ್ ಪ್ರಜೆ ಹೈದರಾಬಾದ್​ನಿಂದ ಅಹ್ಮದಾಬಾದ್​ಗೆ ಹೋಗಿ ಅಲ್ಲಿಂದ ಬ್ರಿಟಿಷ್ ಏರ್​ವೇಸ್​ ವಿಮಾನದ ಮೂಲಕ ಶುಕ್ರವಾರ ರಾತ್ರಿ ತೆರಳಲಿದ್ದಾರೆ.

ಯುಕೆಯಲ್ಲಿ ಪ್ರಾಧ್ಯಾಪಕರಾಗಿರುವ ಬ್ರಿಯಾಂಟ್​ ಅವರು ಸ್ವದೇಶಕ್ಕೆ ಮರಳಲು ಬ್ರಿಟಿಷ್ ರಾಯಭಾರ ಕಚೇರಿ ಅನುಮತಿ ನೀಡಿದೆ. ಬ್ರಿಯಾಂಟ್​ ತಿರುಮಲದಲ್ಲಿರುವಾಗ ಪೊಲೀಸರು ಅವರನ್ನು ಕ್ವಾರಂಟೈನ್​ಗೆ ದಾಖಲಿಸಿದ್ದರು. ಮೂರು ವಾರಗಳ ಕ್ವಾರಂಟೈನ್​ ಬಳಿಕ ಅವರ ಕೋವಿಡ್​ ಪರೀಕ್ಷಾ ವರದಿ ನೆಗೆಟಿವ್​ ಬಂದಿತ್ತು. ಜಿಲ್ಲಾ ಕಲೆಕ್ಟರ್​ ಮತ್ತು ಎಸ್ಪಿ ಅವರು ಬ್ರಿಯಾಂಟ್​ ನಿರ್ಗಮನಕ್ಕೆ ಅನುಮತಿ ನೀಡಿ ಹೈದರಾಬಾದ್​ವರೆಗೆ ಕ್ಯಾಬ್​ ವ್ಯವಸ್ಥೆ ಮಾಡಿದ್ದರು.

ಕಳೆದ ಅಕ್ಟೋಬರ್​ನಲ್ಲಿ ಭಾರತಕ್ಕೆ ಬಂದಿದ್ದ ಅವರು, ಶೀಘ್ರ ಭಾರತಕ್ಕೆ ಮತ್ತೊಮ್ಮೆ ಬಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details