ನವದೆಹಲಿ/ಲಂಡನ್: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಟೀಕಿಸಿದ್ದ ಬ್ರಿಟನ್ನ ಲೇಬರ್ ಪಕ್ಷದ ಸಂಸದೆ ಡೆಬ್ಬಿ ಅಬ್ರಾಹಂ ಅವರಿಗೆ ಭಾರತ ಪ್ರವೇಶಿಸಲು ಗೃಹ ಸಚಿವಾಲಯ ವೀಸಾ ನಿರಾಕರಿಸಿದೆ. ಅವರ ವೀಸಾ ಹೊರತಾಗಿ ಭಾರತಕ್ಕೆ ಪ್ರವೇಶಿಸುವುದಕ್ಕೂ ನಿರಾಕರಿಸಿದೆ.
ಅವರು ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದರು. ಹೀಗಾಗಿ, ದುಬೈ ವಿಮಾನ ನಿಲ್ದಾಣದ ಮೂಲಕ ಬೆಳಗ್ಗೆ ದೆಹಲಿಗೆ ಆಗಮಿಸಿದ್ದರು. ಕಾಶ್ಮೀರಕ್ಕೆ ಆಗಮಿಸುವ ಎಲ್ಲಾ ಪಕ್ಷಗಳ ಸಂಸತ್ ಸದಸ್ಯರ ಅಧ್ಯಕ್ಷರಾಗಿರುವ ಅಬ್ರಾಹಂ ಅವರು ಕುಟುಂಬ ಮತ್ತು ಸ್ನೇಹಿತರನ್ನು ಭೇಟಿಯಾಗಲು ಬಂದಿದ್ದರು.
ಕಳೆದ ವರ್ಷ ಅಕ್ಟೋಬರ್ನಲ್ಲಿ ಭಾರತದ ಪ್ರವಾಸ ಕೈಗೊಳ್ಳುವ ಸಲುವಾಗಿ ಒಂದು ವರ್ಷದ ಅವಧಿಗೆ ಇ-ವೀಸಾ ಪಡೆದುಕೊಂಡಿದ್ದರು. ಅದು ಈ ವರ್ಷದ ಅಕ್ಟೋಬರ್ವರೆಗೂ ಮಾನ್ಯತೆ ಹೊಂದಿತ್ತು.