ಕರ್ನಾಟಕ

karnataka

ETV Bharat / bharat

ಶಿಮ್ಲಾಗೆ ಬಂದು 106 ವರ್ಷಗಳ ಹಿಂದಿನ ಜನನ ಪ್ರಮಾಣ ಪತ್ರ ಪಡೆದ ಬ್ರಿಟನ್​​ ದಂಪತಿ.. - ತಾಯಿಯ ಜನನ ಪ್ರಮಾಣಪತ್ರ ಪಡೆದ ಬ್ರಿಟನ್​ ದಂಪತಿ

ಇಂಗ್ಲೆಂಡ್‌ನ ಸೌತಾಂಪ್ಟನ್‌ನ ಜೊಲಿಯನ್ ತನ್ನ ಪತ್ನಿಯೊಂದಿಗೆ ಶನಿವಾರ ಶಿಮ್ಲಾಗೆ ಭೇಟಿ ನೀಡಿ ಅಲ್ಲಿನ ಮುನ್ಸಿಪಲ್​ ಕಾರ್ಪೊರೇಶನ್​ನಲ್ಲಿ 106 ವರ್ಷಗಳ ಹಿಂದೆ ಜನಿಸಿದ ತನ್ನ ತಾಯಿ ಸ್ವೋರ್​ಜತಾ​ ಅವರ ಜನನ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ.

British couple
ಬ್ರಿಟನ್​​ ದಂಪತಿ

By

Published : Feb 24, 2020, 7:34 PM IST

ಶಿಮ್ಲಾ: ಬೆಟ್ಟಗಳ ರಾಣಿ ಎಂದೇ ಪ್ರಸಿದ್ದಿ ಪಡೆದಿರುವ ಶಿಮ್ಲಾ, ಬ್ರಿಟಿಷ್​ ಆಳ್ವಿಕೆಯ ಕಾಲದಲ್ಲಿ ಬ್ರಿಟಿಷರ ರಾಜಧಾನಿಯಾಗಿತ್ತು. ಆ ವೇಳೆ ವಾಸವಿದ್ದ ಬ್ರಿಟಿಷರ ಜನನ-ಮರಣ ಪ್ರಮಾಣ ಪತ್ರಗಳ ದಾಖಲೆಗಳು ಇಲ್ಲಿವೆ. ಪ್ರತಿವರ್ಷ ಬ್ರಿಟಿಷರು ತಮ್ಮ ಪೂರ್ವಜರ ಜನನ ಅಥವಾ ಮರಣದ ಪ್ರಮಾಣಪತ್ರ ಪಡೆಯಲು ಇಲ್ಲಿಗೆ ಬರುತ್ತಾರೆ.

ಅದೇ ರೀತಿ ಇಂಗ್ಲೆಂಡ್‌ನ ಸೌತ್ ಹ್ಯಾಂಪ್ಟನ್‌ನಿಂದ ಬಂದಿದ್ದ ಜಲಿಯನ್ ತನ್ನ ಪತಿಯೊಂದಿಗೆ ಶನಿವಾರ ಶಿಮ್ಲಾಗೆ ಭೇಟಿ ನೀಡಿ ಅಲ್ಲಿನ ಮುನ್ಸಿಪಲ್​ ಕಾರ್ಪೊರೇಶನ್​ನಲ್ಲಿ 106 ವರ್ಷಗಳ ಹಿಂದೆ ಜನಿಸಿದ ತನ್ನ ತಾಯಿ ಪಿಎಂ ಸ್ವಾಯರ್ ಅವರ ಜನನ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ.

ಶಿಮ್ಲಾ ಮುನ್ಸಿಪಲ್ ಕಾರ್ಪೊರೇಷನ್‌..

ತನ್ನ ತಾಯಿಯ ಜನನ ಪ್ರಮಾಣ ಪತ್ರವನ್ನು ನೋಡಿ ಜಲಿಯನ್ ತುಂಬಾ ಖುಷಿಪಟ್ಟಿದ್ದಾರೆ. ತನ್ನ ತಾಯಿ ಮತ್ತು ಆಕೆಯ ತಾತ ದೀರ್ಘಕಾಲ ಇಲ್ಲಿಯೇ ವಾಸವಿದ್ದರು. ಅಲ್ಲದೇ ಅವರು ಹುಟ್ಟಿದ ಸ್ಥಳವು ಇದೇ ಆಗಿದ್ದು, ಇಲ್ಲಿ ಅವರ ತಾಯಿಯ ಅನೇಕ ನೆನಪುಗಳಿವೆ ಎಂದು ಸಂತೋಷ ವ್ಯಕ್ತಪಡಿಸಿದರು.

ಜಲಿಯನ್ ಶಿಮ್ಲಾ ಮುನ್ಸಿಪಲ್ ಕಾರ್ಪೊರೇಶನ್‌ನ ಜಂಟಿ ಆಯುಕ್ತರನ್ನು ಭೇಟಿ ಮಾಡಿ ತಮ್ಮ ತಾಯಿಯ ಜನನ ಪ್ರಮಾಣ ಪತ್ರ ಪಡೆದಿದ್ದಾರೆ. ಜನನ ಪ್ರಮಾಣಪತ್ರ ದಾಖಲೆಯು ಸಂಪೂರ್ಣ ಕೈ ಬರಹದಲ್ಲಿದೆ. ಅದನ್ನು ನೋಡಿ ದಂಪತಿ ಆಶ್ಚರ್ಯಚಕಿತರಾಗಿದ್ದಾರೆ.

ವರದಿಯ ಪ್ರಕಾರ, ಜೆಲಿಯನ್ ತಾಯಿ 22 ಸೆಪ್ಟೆಂಬರ್ 1914ರಂದು ಶಿಮ್ಲಾದಲ್ಲಿ ಜನಿಸಿದರು. ಜೆಲಿಯನ್​ ಅವರ ಅಜ್ಜ ಆ ವೇಳೆಯಲ್ಲಿ ಶಿಮ್ಲಾದಲ್ಲಿ ಕ್ಯಾಪ್ಟನ್ ಆಗಿದ್ದರು. ಮತ್ತು ಅಲ್ಲಿ ಸ್ವಂತ ಮನೆಯನ್ನು ಸಹ ಹೊಂದಿದ್ದರು. ಆದರೆ, ಜಲಿಯನ್​ ದಂಪತಿಗೆ ತಮ್ಮ ಅಜ್ಜ ವಾಸವಿದ್ದ ಕಟ್ಟಡ ಸಿಕ್ಕಿಲ್ಲ. ಆದರೆ, ತಮ್ಮ ತಾಯಿಯ ಜನನ ಪ್ರಮಾಣ ಪತ್ರ ಪಡೆದಿದ್ದಾರೆ. ಈ ಪತ್ರವನ್ನು ತಮ್ಮ ಮನೆಯಲ್ಲಿ ಫ್ರೇಮ್​ ಮಾಡಿ ಇಡುವುದಾಗಿ ತಿಳಿಸಿದ್ದಾರೆ.

ಮಹಾನಗರ ಪಾಲಿಕೆಯ ಜಂಟಿ ಆಯುಕ್ತ ಅಜಿತ್ ಭಾರದ್ವಾಜ್ ಈ ಬಗ್ಗೆ ಮಾತನಾಡಿ, ಪ್ರತಿ ವರ್ಷ ಇಂಗ್ಲೆಂಡ್‌ನಿಂದ ಜನ ತಮ್ಮ ಪೂರ್ವಜರ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಸಂಗ್ರಹಿಸಲು ಇಲ್ಲಿಗೆ ಬರುತ್ತಾರೆ. ನಿಗಮವು 1870ರ ಹಿಂದಿನ ದಾಖಲೆಗಳನ್ನು ಹೊಂದಿದೆ ಎಂದು ತಿಳಿಸಿದರು. ಜಲಿಯನ್​ಗೆ ಜನನ ಪ್ರಮಾಣ ಪತ್ರ ಹಸ್ತಾಂತರಿಸಲಾಗಿದೆ ಎಂದರು.

ABOUT THE AUTHOR

...view details