ಛತ್ತೀಸ್ಗಢ:ಪರಿಸರಕ್ಕೆ ಹಾನಿ ಆಗಬಾರದು ಮತ್ತು ನಗರ ಕ್ಲೀನ್ ಆಗಿರ್ಬೇಕು ಅಂದ್ರೇ ಮೊದಲು ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಆಗಬೇಕು. ಆದರೆ, ಟನ್‌ಗಟ್ಟಲೇ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗ್ತಿರೋದ್ರಿಂದ ಸಿಟಿಗಳಲ್ಲಿ ಅದರ ವಿಲೇವಾರಿ ಆಗ್ತಿಲ್ಲ. ಚಿಂದಿ ಆಯುವವರು ತ್ಯಾಜ್ಯ ಸಂಗ್ರಹಿಸಿ ಅದರ ಮಾರಾಟದಿಂದ ಒಂದು ಹೊತ್ತಿನ ಊಟಕ್ಕೂ ಆಗೋದಿಲ್ಲ. ಅದಕ್ಕಾಗಿ ಈಗ ದೇಶದಲ್ಲಿಯೇ ಮೊದಲ ಬಾರಿಗೆ ಗಾರ್ಬೇಜ್ ಕೆಫೆಯೊಂದು ಓಪನ್ ಆಗ್ತಿದೆ.
1 ಕೆಜಿಗೆ ಊಟ, 500 ಗ್ರಾಂಗೆ ಉಪಹಾರ ನೀಡಲು ನಿರ್ಧಾರ!
ಚಿಂದಿ ಆಯುವವರ ಹೊಟ್ಟೆ ತುಂಬಿಸಲೆಂದೇ ದೇಶದ ಮೊದಲ ಗಾರ್ಬೇಜ್ ಕೆಫೆ ಛತ್ತೀಸಢದ ಅಂಬಿಕಾಪುರ ನಗರದಲ್ಲಿ ಓಪನಾಗಲಿದೆ. ಚಿಂದಿ ಆಯುವವರು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಕೊಟ್ರೇ ಅವರಿಗೆ ಮಹಾನಗರ ಪಾಲಿಕೆ ವತಿಯಿಂದ ಫ್ರೀ ಊಟ ಕೊಡಲಾಗುತ್ತೆ. 1ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ನೀಡಿದ್ರೇ ಊಟ ಹಾಗೂ 500 ಗ್ರಾಂ ತ್ಯಾಜ್ಯಕ್ಕೆ ಉಪಹಾರ ನೀಡಲಾಗುತ್ತದೆ.ಕೆಫೆಯಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ನಿರ್ಮಾಣದಲ್ಲಿ ಬಳಸುವ ಯೋಜನೆ ಪಾಲಿಕೆ ಹಾಕಿಕೊಂಡಿದೆ. ಪಾಲಿಕೆ ಬಜೆಟ್ ಮಂಡಿಸಿದ ಮೇಯರ್ ಅಜಯ್ ಟಿರ್ಕೆ, ಗಾರ್ಬೇಜ್ ಕೆಫೆ ನಗರದ ಮುಖ್ಯ ಬಸ್ ನಿಲ್ದಾಣದಿಂದಲೇ ಕಾರ್ಯ ನಿರ್ವಹಸಲಿದೆ ಎಂದು ಹೇಳಿದ್ದಾರೆ.