ಮ್ಯೂನಿಚ್ ( ಜರ್ಮನಿ): ಫೆ. 14ರಿಂದ ಆರಂಭವಾದ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಭದ್ರತಾ ನೀತಿಯ ಕುರಿತು ಚರ್ಚೆ ನಡೆಸಲಾಯಿತು. ಈ ವೇಳೆ ಕಾಶ್ಮೀರ ಸಮಸ್ಯೆಯ ಕುರಿತು ಯುಎಸ್ ಹಿರಿಯ ಸೆನೆಟರ್ ಪ್ರಸ್ತಾಪಿಸಿದಾಗ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಪ್ರತ್ಯುತ್ತರ ನೀಡಿದ್ದಾರೆ.
ಯುಎಸ್ ಸೆನೆಟರ್ಗೆ ಕೇಂದ್ರ ಸಚಿವ ಜೈ ಶಂಕರ್ ತಿರುಗೇಟು.. ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ನಡೆದ ಸಂವಾದದ ಸಂದರ್ಭದಲ್ಲಿ ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ಕಾಶ್ಮೀರ ಸಮಸ್ಯೆಯ ಬಗ್ಗೆ ಉಲ್ಲೇಖಿಸಿ ಮಾತನಾಡಿದ್ದಾರೆ.
ಭಾರತ ಮುಂದುವರಿಯುತ್ತಿದೆ. ಆದರೆ, ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಪ್ರಜಾಪ್ರಭುತ್ವದ ದಾರಿ ಹಿಡಿದಿದ್ದೀರಿ. ಇದು ಕಾಶ್ಮೀರ ವಿಚಾರದಲ್ಲಿ ಏನಾಗುತ್ತದೆಯೋ ತಿಳಿದಿಲ್ಲ. ಎರಡು ಪ್ರಜಾಪ್ರಭುತ್ವಗಳು ವಿಭಿನ್ನ ರೀತಿಯಲ್ಲಿ ಕೊನೆಗೊಳ್ಳಲಿದ್ದು, ಪ್ರಜಾಪ್ರಭುತ್ವವನ್ನು ಮಾರಾಟ ಮಾಡಲು ಉತ್ತಮ ಮಾರ್ಗವೆಂದರೆ ಕಾಶ್ಮೀರ ಸಮಸ್ಯೆಯನ್ನ ಪ್ರಜಾಪ್ರಭುತ್ವದ ರೀತಿ ಬಗೆಹರಿಸುವುದು ಎಂದು ಹೇಳಿದ್ದರು. ಇದಕ್ಕೆ ಉತ್ತರಿಸಿದ ಸಚಿವ ಎಸ್. ಜೈಶಂಕರ್, "ಚಿಂತಿಸಬೇಡಿ, ಸೆನೆಟರ್. ನಮ್ಮ ಪ್ರಜಾಪ್ರಭುತ್ವವು ಅದನ್ನು ಇತ್ಯರ್ಥಗೊಳಿಸುತ್ತದೆ ಎಂದು ಹೇಳಿದ್ದಾರೆ.
ಈ ವೇಳೆ ಬಹುಪಕ್ಷೀಯತೆ ಕುರಿತು ಮಾತನಾಡಿದ ಅವರು, ಇಲ್ಲಿ ಬಹುಪಕ್ಷೀಯತೆ ದುರ್ಬಲಗೊಂಡಿದೆ ಎಂಬುದಕ್ಕೆ ಅಲ್ಲಿರುವ ಬಿರುಕುಗಳೇ ಸಾಕ್ಷಿಯಂತಿದೆ. ಆದರೆ, ಬಹುಪಕ್ಷೀಯತೆಯನ್ನು ಸೃಜನಶೀಲ ರಾಜತಾಂತ್ರಿಕತೆ ಮತ್ತು ತಿಳುವಳಿಕೆಯಿಂದ ಬಲಪಡಿಸಬಹುದು ಎಂದರು.