ವಾರಣಾಸಿ: ಈರುಳ್ಳಿ ಸದ್ಯದ ಮಟ್ಟಿಗೆ ಚಿನ್ನವನ್ನು ಛೇಡಿಸುವ ಮಟ್ಟಕ್ಕೆ ಹೋಗಿದೆ. ಕಾರಣ ಬೆಲೆ ಏರಿಕೆ. ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಕೂಡ ಆಗಿದೆ. ತಿನ್ನಲು ಬಳಕೆಯಾಗುತ್ತಿದ್ದ ಈರುಳ್ಳಿ ಈಗ ತನ್ನ ವರ್ಚಸ್ಸನ್ನೇ ಬದಲಾಯಿಸಿಕೊಂಡಂತೆ ಕಾಣುತ್ತಿದೆ.
ಈರುಳ್ಳಿ-ಬೆಳ್ಳುಳ್ಳಿ ಹಾರ ಬದಲಾಯಿಸಿಕೊಂಡ ನೂತನ ದಂಪತಿ! ಬೆಲೆ ಏರಿಕೆಗೆ ಈ ರೀತಿಯಲ್ಲೂ ಆಕ್ರೋಶ - ಈರುಳ್ಳಿಯ ಹೆಚ್ಚಿನ ಬೆಲೆ
ನೂತನವಾಗಿ ಮದುವೆಯಾದ ಜೋಡಿ ಈರುಳ್ಳಿ-ಬೆಳ್ಳುಳ್ಳಿ ಹಾರವನ್ನು ಬದಲಾಯಿಸಿಕೊಳ್ಳುವುದರ ಮುಖಾಂತರ ನವ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹೌದು, ನೂತನವಾಗಿ ಮದುವೆಯಾದ ಜೋಡಿ ಈರುಳ್ಳಿ-ಬೆಳ್ಳುಳ್ಳಿ ಹಾರವನ್ನು ಬದಲಾಯಿಸಿಕೊಳ್ಳುವುದರ ಮುಖಾಂತರ ನವ ಜೀವನಕ್ಕೆ ಕಾಲಿಟ್ಟಿದೆ. ಇನ್ನು ಈರುಳ್ಳಿ ಬೆಲೆ ಏರಿಕೆ ವಿರುದ್ಧ ಹಲವಾರು ಪ್ರತಿಭಟನೆಗಳು ಇಂದಿಗೂ ನಡೆಯುತ್ತಲೇ ಇವೆ. ಆದರೆ, ಬೆಲೆ ಕಡಿಮೆ ಮಾಡಲು ಮಾತ್ರ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಈ ಜೋಡಿ ಬೆಲೆ ಏರಿಕೆ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ವ್ಯಂಗ್ಯವಾದ ರೀತಿಯಲ್ಲಿ ಆಕ್ರೋಶ ಹೊರಹಾಕಿದೆ.
ಈರುಳ್ಳಿ ವಿಷಯ ಕೇವಲ ಇಷ್ಟಕ್ಕೆ ಮಾತ್ರ ಸೀಮಿತವಾಗದೆ ಟಿಕ್ಟಾಕ್ ನಂತರ ಆ್ಯಪ್ಗಳಲ್ಲಿ ಜನರು ಇದೊಂದು ಆಭರಣ ಎಂಬಂತೆ ನೋಡುವ ದೃಶ್ಯಗಳು ವೈರಲ್ ಆಗುತ್ತಿವೆ. ಅಲ್ಲದೆ, ಪ್ರತಿಷ್ಠಿತ ಜ್ಯುವೆಲ್ಲರಿ ಆ್ಯಡ್ನ ವಾಯ್ಸ್ ಬಳಸಿಕೊಂಡು ಈರುಳ್ಳಿಯೇ ಆಭರಣ ಎಂದು ಬಿಂಬಿಸುತ್ತಿದ್ದಾರೆ.