ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸನಾರೊ, ಜನವರಿ 24 ರಿಂದ ತಮ್ಮ ನಾಲ್ಕು ದಿನಗಳ ಭಾರತ ಭೇಟಿ ಆರಂಭಿಸಲಿದ್ದಾರೆ.
71ನೇ ಗಣರಾಜ್ಯೋತ್ಸವ: ಜ.24 ರಿಂದ ಬ್ರೆಜಿಲ್ ಅಧ್ಯಕ್ಷರ ಭಾರತ ಭೇಟಿ ಆರಂಭ - ಜ.24 ರಿಂದ ಬ್ರೆಜಿಲ್ ಅಧ್ಯಕ್ಷರ ಭಾರತ ಭೇಟಿ ಆರಂಭ
ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸನಾರೊ ಜನವರಿ 24 ರಿಂದ 27ರ ವರೆಗೆ ಭಾರತಕ್ಕೆ ಭೇಟಿ ನೀಡಲಿದ್ದು, ಇವರು ಭಾರತದ 71ನೇ ಗಣರಾಜ್ಯ ದಿನಾಚರಣೆ ಪಥಸಂಚಲನದ ಮುಖ್ಯ ಅತಿಥಿಯಾಗಲಿದ್ದಾರೆ.
ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸನಾರೊ
ಅಧಿಕಾರಕ್ಕೆ ಬಂದ ಬಳಿಕ ಬೋಲ್ಸೊನಾರೊ ಅವರ ಮೊದಲ ಭಾರತ ಭೇಟಿ ಇದಾಗಿದ್ದು, ಇವರಿಗೆ ಏಳು ಮಂದಿ ಸಚಿವರು, ಉನ್ನತ ಅಧಿಕಾರಿಗಳು ಹಾಗೂ ದೊಡ್ಡ ವ್ಯಾಪಾರ ನಿಯೋಗ ಸಾಥ್ ನೀಡಲಿದೆ.
'ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸನಾರೊ ಜನವರಿ 24 ರಿಂದ 27ರ ವರೆಗೆ ಭಾರತಕ್ಕೆ ಭೇಟಿ ನೀಡಲಿದ್ದು, ಇವರು ಭಾರತದ 71ನೇ ಗಣರಾಜ್ಯ ದಿನಾಚರಣೆ ಪಥಸಂಚಲನದ ಮುಖ್ಯ ಅತಿಥಿಯಾಗಲಿದ್ದಾರೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.