ನವದೆಹಲಿ: ಭಾರತೀಯ ನೌಕಾಪಡೆಯು ಸ್ಥಳೀಯವಾಗಿ ನಿರ್ಮಿಸಲಾದ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ತಿಳಿಸಿದೆ.
ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ - ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ
ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು ಎಂದು ಡಿಆರ್ಡಿಒ ಮಾಹಿತಿ ನೀಡಿದೆ.
ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ
ಉನ್ನತ ಮಟ್ಟದ ಮತ್ತು ಅತ್ಯಂತ ಸಂಕೀರ್ಣವಾದ ಕುಶಲತೆಯೊಂದಿಗೆ ಕ್ಷಿಪಣಿ ನಿಖರವಾಗಿ ತನ್ನ ಗುರಿಯನ್ನು ಯಶಸ್ವಿಯಾಗಿ ತಲುಪಿದೆ ಎಂದು ಮಾಹಿತಿ ನೀಡಿದೆ.
"ಬ್ರಹ್ಮೋಸ್, ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯನ್ನು 2020ರ ಅಕ್ಟೋಬರ್ 18 ರಂದು ಭಾರತೀಯ ನೌಕಾಪಡೆಯ ಸ್ಥಳೀಯವಾಗಿ ನಿರ್ಮಿಸಿದ ಸ್ಟೆಲ್ತ್ ಡೆಸ್ಟ್ರಾಯರ್ ಐಎನ್ಎಸ್ ಚೆನ್ನೈನಿಂದ ಅರೇಬಿಯನ್ ಸಮುದ್ರದಲ್ಲಿದ್ದ ಗುರಿಯನ್ನು ಹೊಡೆಯಲಾಯಿತು. ಕ್ಷಿಪಣಿ ಪಿನ್-ಪಾಯಿಂಟ್ ನಿಖರತೆಯೊಂದಿಗೆ ಗುರಿಯನ್ನು ಯಶಸ್ವಿಯಾಗಿ ಹೊಡೆದಿದೆ" ಎಂದು ಡಿಆರ್ಡಿಒ ಟ್ವೀಟ್ ಮಾಡಿದೆ.