ಕರ್ನಾಟಕ

karnataka

'ಮೇಡ್​ ಇನ್​ ಚೀನಾ'ವಸ್ತುಗಳ ಬಹಿಷ್ಕಾರ ಕರೆ: 17 ಬಿಲಿಯನ್ ಯುಎಸ್​​ಡಿ ಮೌಲ್ಯದ ಚೀನಾ ರಫ್ತಿಗೆ ಹೊಡೆತ !

By

Published : Jun 19, 2020, 12:07 PM IST

ಚೀನಾದಿಂದ ಭಾರತಕ್ಕೆ ಆಮದಾಗುವ ಸುಮಾರು 17 ಶತಕೋಟಿ ಡಾಲರ್( ಅಂದಾಜು 1.29 ಲಕ್ಷ ಕೋಟಿ) ಮೌಲ್ಯದ ಸರಕುಗಳನ್ನು ಚಿಲ್ಲರೆ ವ್ಯಾಪಾರಿಗಳು ಮಾರಾಟ ಮಾಡುತ್ತಾರೆ. ಇದರಲ್ಲಿ ಹೆಚ್ಚಾಗಿ ಆಟಿಕೆಗಳು, ಗೃಹೋಪಯೋಗಿ ವಸ್ತುಗಳು, ಮೊಬೈಲ್, ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ಸರಕುಗಳು ಮತ್ತು ಸೌಂದರ್ಯ ವರ್ಧಕಗಳು ಸೇರಿವೆ. ಆದರೆ, ಇವುಗಳ ಜಾಗದಲ್ಲಿ ಭಾರತೀಯ ಉತ್ಪನ್ನಗಳನ್ನು ಬಳಸುವುದು ಸಾಧ್ಯ ಎಂದು ರಾಷ್ಟ್ರೀಯ ವ್ಯಾಪಾರ ಸಂಸ್ಥೆ ತಿಳಿಸಿದೆ.

boycott-call-may-impact-chinese-exports-worth-usd-17-billion
'ಮೇಡ್​ ಇನ್​ ಚೈನಾ'ವಸ್ತುಗಳ ಬಹಿಷ್ಕಾರ

ಕೋಲ್ಕತ್ತಾ: ಲಡಾಖ್ ನಲ್ಲಿ ಭಾರತ- ಚೀನಾ ಮುಖಾಮುಖಿ ಕಾದಾಟದ ನಂತರ ಚೀನಾದ ಸರಕುಗಳನ್ನು ಬಹಿಷ್ಕರಿಸುವ ರಾಷ್ಟ್ರವ್ಯಾಪಿ ಕೂಗು ಜೋರಾಗಿದೆ. ಭಾರತದ ವ್ಯಾಪಾರಿಗಳು ಚೀನಾದಿಂದ ವಾರ್ಷಿಕವಾಗಿ 74 ಬಿಲಿಯನ್ ಯುಸ್​ ಡಾಲರ್ಸ್(56,39,91,00,00,000.00(ಸುಮಾರು 5.6ಲಕ್ಷ ಕೋಟಿ)​​ ಮೌಲ್ಯದ ಉತ್ಪನ್ನಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುತ್ತಾರೆ. ಈ ವಸ್ತುಗಳ ಮಾರಾಟವನ್ನು ನಿರ್ಬಂಧಿಸಲು ಇ-ಕಾಮರ್ಸ್ ಸಂಸ್ಥೆಗಳಿಗೆ ನಿರ್ದೇಶನ ನೀಡುವಂತೆ ಕೇಂದ್ರವನ್ನು ಒತ್ತಾಯಿಸಲಾಗ್ತಿದೆ.

ಚೀನಾದಿಂದ ಭಾರತಕ್ಕೆ ಆಮದಾಗುವ ಸುಮಾರು 17 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಚಿಲ್ಲರೆ ವ್ಯಾಪಾರಿಗಳು ಮಾರಾಟ ಮಾಡುತ್ತಾರೆ. ಇದರಲ್ಲಿ ಹೆಚ್ಚಾಗಿ ಆಟಿಕೆಗಳು, ಗೃಹೋಪಯೋಗಿ ವಸ್ತುಗಳು, ಮೊಬೈಲ್, ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ಸರಕುಗಳು ಮತ್ತು ಸೌಂದರ್ಯವರ್ಧಕಗಳು ಸೇರಿವೆ. ಆದರೆ, ಇವುಗಳ ಜಾಗದಲ್ಲಿ ಭಾರತೀಯ ಉತ್ಪನ್ನಗಳನ್ನು ಬಳಸುವುದು ಸಾಧ್ಯ ಎಂದು ರಾಷ್ಟ್ರೀಯ ವ್ಯಾಪಾರ ಸಂಸ್ಥೆ ತಿಳಿಸಿದೆ.

''ನಾವು, ಅಖಿಲ ಭಾರತ ವ್ಯಾಪಾರ್ ಮಂಡಲ್ ಫೆಡರೇಶನ್"ನಲ್ಲಿ, ನಮ್ಮ ಸದಸ್ಯರಿಗೆ ತಮ್ಮ ಚೀನಿ ಉತ್ಪನ್ನಗಳ ದಾಸ್ತಾನುಗಳನ್ನು ತೆರವುಗೊಳಿಸಲು ಸಲಹೆ ನೀಡುತ್ತಿದ್ದೇವೆ. ಇ - ಕಾಮರ್ಸ್ ಕಂಪನಿಗಳು ಚೀನಾದ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿರ್ಬಂಧಿಸುವಂತೆ ನಾವು ಸರ್ಕಾರವನ್ನು ಕೋರುತ್ತಿದ್ದೇವೆ "ಎಂದು ವಿ.ಕೆ. ಸಂಘದ ಪ್ರಧಾನ ಕಾರ್ಯದರ್ಶಿ ಬನ್ಸಾಲ್ ತಿಳಿಸಿದ್ದಾರೆ.

ಇದೇ ವೇಳೆ, ಪಶ್ಚಿಮ ಬಂಗಾಳ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಸುಶೀಲ್ ಪೋದಾರ್, ಚೀನಾದ ಸರಕುಗಳ ವಹಿವಾಟು ಸಾಧ್ಯವಾದಷ್ಟು ದೂರವಿಡುವಂತೆ ಸದಸ್ಯರಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಮತ್ತೊಂದು ರಾಷ್ಟ್ರೀಯ ವ್ಯಾಪಾರಿಗಳ ಸಂಸ್ಥೆ, ದಿ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT), ಚೀನಾದ ಸರಕುಗಳ ಬಹಿಷ್ಕಾರಕ್ಕಾಗಿ 'ಭಾರತೀಯ ಸಾಮಾನ್ - ಹಮಾರಾ ಅಭಿಮಾನ್' ಅಭಿಯಾನ ಆರಂಭಿಸಿದೆ. ಜೊತೆಗೆ ಚೀನಾ ತಯಾರಿಸಿದ ಉತ್ಪನ್ನಗಳ ಬಳಕೆಗೆ ಉತ್ತೇಜನ ನೀಡುವುದನ್ನು ನಿಲ್ಲಿಸುವಂತೆ CAIT ಹಲವಾರು ಸೆಲೆಬ್ರೆಟಿಗಳಿಗೆ ಮುಕ್ತ ಪತ್ರ ಬರೆದಿದೆ.

ABOUT THE AUTHOR

...view details