ಕರ್ನಾಟಕ

karnataka

ETV Bharat / bharat

ಗೋವಾದಲ್ಲಿ ಚೀನಾ ವಸ್ತುಗಳನ್ನು ಬ್ಯಾನ್‌ ಮಾಡಿ.. ಬಿಜೆಪಿ ರಾಜ್ಯಾಧ್ಯಕ್ಷರ ಒತ್ತಾಯ - ಪ್ರಧಾನಿ ನರೇಂದ್ರ ಮೋದಿ

ಚೀನಾ ಮೋಜಿನಲ್ಲಿದೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುವುದು ಹೇಗೆ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೊತ್ತಿದೆ.

boycott-ban-chinese-products-in-goa-state-bjp-president
ಗೋವಾದಲ್ಲಿ ಚೀನಾ ವಸ್ತುಗಳನ್ನು ಬ್ಯಾನ್‌ ಮಾಡಿ; ಬಿಜೆಪಿ ರಾಜ್ಯಾಧ್ಯಕ್ಷ ಒತ್ತಾಯ

By

Published : Jun 2, 2020, 5:19 PM IST

ಪಣಜಿ: ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿ ಮತ್ತು ಗೋವಾದಲ್ಲಿ ಇವುಗಳನ್ನು ಬ್ಯಾನ್‌ ಮಾಡಬೇಕು ಎಂದು ಅಲ್ಲಿನ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ್‌ ಸೇಠ್‌ ತನವಾಡೆ ಕರೆ ನೀಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸದಾನಂದ್‌, ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ 'ಆತ್ಮನಿರ್ಭರ್‌ ಭಾರತ್'ಗೆ ಬೆಂಬಲ ನೀಡಲು ಜನರು ಭಾರತದಲ್ಲಿ ತಯಾರಿಸಿದ ವಸ್ತುಗಳನ್ನೇ ಖರೀದಿಸಬೇಕು ಎಂದು ಹೇಳಿದ್ದಾರೆ.

ಚೀನಾ ಮೋಜಿನಲ್ಲಿದೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುವುದು ಹೇಗೆ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೊತ್ತಿದೆ ಎಂದಿದ್ದಾರೆ. ಗೋವಾ ಹೆಚ್ಚಾಗಿ ಮಕ್ಕಳ ಆಟಿಕೆಗಳು ಮತ್ತು ಉತ್ಪನ್ನಗಳಿಗೆ ಚೀನಾದ ಮೇಲೆ ಅವಲಂಬಿತವಾಗಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿರುವ ತನವಾಡೆ, ಕೆಲವೊಂದನ್ನು ರಾತ್ರೋರಾತ್ರಿ ನಿಲ್ಲಿಸಲು ಸಾಧ್ಯವಿಲ್ಲ. ದೀರ್ಘಾವಧಿಯಲ್ಲಿ ಇದರಿಂದ ಹೊರಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಸ್ವದೇಶಿ ಉಡುಪುಗಳನ್ನು ಧರಿಸುವಂತೆ ಕರೆ ನೀಡಿದ್ದಾರೆ. ಕೋವಿಡ್‌-19 ವಿಚಾರದಲ್ಲಿ ಭಾರತದ ಮಕ್ಕಳು ಕೂಡ ಚೀನಾ ವಿರುದ್ಧ ಕುಪಿತಗೊಂಡಿದ್ದಾರೆ. ಚೀನಾ ವಸ್ತುಗಳನ್ನು ಖರೀದಿಸಬೇಡಿ ಅಂತಾ ಪುತ್ರ ತನ್ನನ್ನು ಒತ್ತಾಯಿಸಿದ್ದಾನೆ ಎಂದು ತಂದೆಯೋರ್ವ ನನ್ನ ಬಳಿ ಹೇಳಿದ್ದರು ಎಂದು ತನವಾಡೆ ಹೇಳಿದ್ದಾರೆ.

ABOUT THE AUTHOR

...view details