ಕರ್ನಾಟಕ

karnataka

ETV Bharat / bharat

ಆನ್​ಲೈನ್​ ತರಗತಿ ಎಫೆಕ್ಟ್​: ಟೀಚರ್​ಗೇ ಅಶ್ಲೀಲ ಸಂದೇಶ ಕಳಿಸಿದ 10ನೇ ಕ್ಲಾಸ್​ ವಿದ್ಯಾರ್ಥಿ!​ - ಮೊರಾದಾಬಾದ್​ನಲ್ಲಿ ಶಿಕ್ಷಕಿಗೆ ಅಶ್ಲೀಲ ಸಂದೇಶ ರವಾನಿಸಿದ ವಿದ್ಯಾರ್ಥಿ

ಪಾಠ ಮಾಡೋ ಶಿಕ್ಷಕಿಗೆ 10ನೇ ಕ್ಲಾಸ್​ ವಿದ್ಯಾರ್ಥಿವೋರ್ವ ಅಶ್ಲೀಲ ಸಂದೇಶ ರವಾನಿಸಿದ ಆರೋಪದ ಮೇಲೆ ತಗಲಾಕ್ಕೊಂಡಿದ್ದಾನೆ. ಆನ್​ಲೈನ್​ ತರಗತಿಯ ವೇಳೆ ವಿದ್ಯಾರ್ಥಿ ಈ ಶಿಕ್ಷಕಿಗೆ ಅಶ್ಲೀಲ ಸಂದೇಶ ಕಳಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

Boy booked for posting obscene messages to teacher
ಶಿಕ್ಷಕಿಗೆ ಅಶ್ಲೀಲ ಸಂದೇಶ ರವಾನಿಸಿದ ವಿದ್ಯಾರ್ಥಿ

By

Published : Sep 14, 2020, 12:30 PM IST

ಮೊರಾದಾಬಾದ್​ (ಉತ್ತರ ಪ್ರದೇಶ): ಆನ್​ಲೈನ್ ತರಗತಿ ವೇಳೆ ಶಿಕ್ಷಕಿಗೇ ವಿದ್ಯಾರ್ಥಿವೋರ್ವ ಅಶ್ಲೀಲ ಸಂದೇಶ ರವಾನಿಸಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಹತ್ತನೇ ತರಗತಿ ವಿದ್ಯಾರ್ಥಿಯ ವಿರುದ್ಧ ಎಫ್​ಐಆರ್​ ದಾಖಲಾಗಿರುವ ಘಟನೆ ಮೊರಾದಾಬಾದ್​ನಲ್ಲಿ ಬೆಳಕಿಗೆ ಬಂದಿದೆ.

ವಿದ್ಯಾರ್ಥಿಯ ತಂದೆಯ ವಿರುದ್ಧವೂ ಶಿಕ್ಷಕಿಗೆ ಫೋನ್​ ಮೂಲಕ ಬೆದರಿಕೆ ಹಾಕಿದ ಆರೋಪದ ಮೇಲೆ ಕೇಸ್​ ದಾಖಲಾಗಿದೆ. ಮೊರಾದಾಬಾದ್​ನ ಖಾಸಗಿ ಶಾಲೆಯ 30 ವರ್ಷದ ಸಮಾಜ ವಿಜ್ಞಾನ ಶಿಕ್ಷಕಿ, ತನ್ನ ವಿದ್ಯಾರ್ಥಿ ಗೂಗಲ್​ ಮೀಟ್​ನಲ್ಲಿ​ ಆನ್​ಲೈನ್ ತರಗತಿ ನಡೆಸುತ್ತಿದ್ದ ವೇಳೆ ಎರಡು ಅಶ್ಲೀಲ ಸಂದೇಶಗಳನ್ನು ರವಾನಿಸಿದ್ದಾನೆ ಎಂದು ದೂರು ನೀಡಿದ್ದಾರೆ. ವಿದ್ಯಾರ್ಥಿ ಕಳಿಸಿದ ಸಂದೇಶವನ್ನು ಆನ್​ಲೈನ್​ ತರಗತಿ ಆಲಿಸುತ್ತಿದ್ದ ಇತರ ವಿದ್ಯಾರ್ಥಿಗಳೂ ನೋಡಿದ್ದಾರೆ. ವಿದ್ಯಾರ್ಥಿ ಅಶ್ಲೀಲ ಸಂದೇಶ ರವಾನಿಸಿದ ಬಗ್ಗೆ ಆತನ ತಂದೆಯ ಬಳಿ ತಿಳಿಸಿದ್ದೆ. ಆದರೆ, ಅವರು ತನ್ನ ಮಗನಿಗೆ ಬುದ್ಧಿ ಹೇಳುವ ಬದಲು ನನಗೇ ಬೆದರಿಕೆ ಹಾಕಿದ್ದಾರೆ ಎಂದು ಶಿಕ್ಷಕಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಶಿಕ್ಷಕಿಯ ದೂರು ಆಧರಿಸಿ ತಂದೆ ಮತ್ತು ಮಗನ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ವಿದ್ಯಾರ್ಥಿಯ ಮೊಬೈಲ್​ನ್ನು ಸೈಬರ್​ ಸೆಲ್​ಗೆ ರವಾನಿಸಲಾಗಿದೆ ಎಂದು ವೃತ್ತ ನಿರೀಕ್ಷಕ ಕುಲದೀಪ್ ಸಿಂಗ್​ ತಿಳಿಸಿದ್ದಾರೆ.

ವಿದ್ಯಾರ್ಥಿ ಮತ್ತು ಆತನ ತಂದೆಯ ವಿರುದ್ಧ ಐಪಿಸಿ ಸೆಕ್ಷನ್ಸ್ 504 ಮತ್ತು 67 ಎ ಅಡಿಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ. ಆತನ ತಂದೆಯ ವಿರುದ್ಧ ಐಪಿಸಿ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಪ್ರಕರಣ ದಾಖಲಿಸಲಾಗಿದೆ ಎಂದು ಸಿವಿಲ್ ಲೈನ್ಸ್ ಎಸ್‌ ಹೆಚ್‌ಒ ನವಾಲ್ ಮಾರ್ವಾ ಹೇಳಿದ್ದಾರೆ.

For All Latest Updates

ABOUT THE AUTHOR

...view details