ಕರ್ನಾಟಕ

karnataka

ETV Bharat / bharat

ಕ್ಯಾನ್ಸರ್ ಚಿಕಿತ್ಸೆಗಾಗಿ ಬಾಕ್ಸರ್ ಡಿಂಗ್ಕೊ ಸಿಂಗ್ ದೆಹಲಿ ಆಸ್ಪತ್ರೆಗೆ ದಾಖಲು - ಬಾಕ್ಸರ್ ಡಿಂಗ್ಕೊ ಸಿಂಗ್

ಪದ್ಮ ಪ್ರಶಸ್ತಿ ಪುರಸ್ಕೃತ ಬಾಕ್ಸರ್ ಡಿಂಗ್ಕೊ ಸಿಂಗ್ ಅವರನ್ನು ಕ್ಯಾನ್ಸರ್ ಚಿಕಿತ್ಸೆಗಾಗಿ ನವದೆಹಲಿಗೆ ಕರೆತರಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

dddd
ಕ್ಯಾನ್ಸರ್ ಚಿಕಿತ್ಸೆಗಾಗಿ ಬಾಕ್ಸರ್ ಡಿಂಗ್ಕೊ ಸಿಂಗ್ ದೆಹಲಿ ಆಸ್ಪತ್ರೆಗೆ ದಾಖಲು !

By

Published : Apr 26, 2020, 11:41 AM IST

ನವದೆಹಲಿ: ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಬಾಕ್ಸರ್ ಡಿಂಗ್ಕೊ ಸಿಂಗ್​ರನ್ನು ಕ್ಯಾನ್ಸರ್ ಚಿಕಿತ್ಸೆಗಾಗಿ ಇಂಫಾಲ್‌ನಿಂದ ಸ್ಪೈಸ್ ಜೆಟ್‌ನ ಏರ್ ಆ್ಯಂಬುಲೆನ್ಸ್ ಮೂಲಕ ದೆಹಲಿಗೆ ಕರೆ ತರಲಾಗಿದೆ.

ಕ್ಯಾನ್ಸರ್ ಚಿಕಿತ್ಸೆಗಾಗಿ ಬಾಕ್ಸರ್ ಡಿಂಗ್ಕೊ ಸಿಂಗ್ ದೆಹಲಿ ಆಸ್ಪತ್ರೆಗೆ ದಾಖಲು

"ಚಾಂಪಿಯನ್ ಬಾಕ್ಸರ್ ಡಿಂಗ್ಕೊ ದೆಹಲಿಯನ್ನು ತಲುಪಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಸ್ಪೈಸ್ ಜೆಟ್​ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ (ಬಿಎಫ್ಐ) ಅಧ್ಯಕ್ಷ ಅಜಯ್ ಸಿಂಗ್ ಹೇಳಿದ್ದಾರೆ. ಸ್ಪೈಸ್ ಜೆಟ್‌ ಉಚಿತವಾಗಿ ಡಿಂಗ್ಕೊ ಸಿಂಗ್​ರನ್ನು ದೆಹಲಿಗೆ ಕರೆ ತಂದಿದೆ. ಬಾಕ್ಸರ್ ಡಿಂಗ್ಕೊ ಸಿಂಗ್ ವಿಮಾನ ನಿಲ್ದಾಣದಿಂದ ನೇರವಾಗಿ ಆ್ಯಂಬುಲೆನ್ಸ್‌ನಲ್ಲಿ ಇನ್ಸ್​ಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್ (ಐಎಲ್‌ಬಿಎಸ್) ಗೆ ದಾಖಲಾಗಿದ್ದಾರೆ. ಅವರೊಂದಿಗೆ ಪತ್ನಿ ಎನ್‌ಗಂಗೋಮ್ ಬಾಬಾಯಿ ದೇವಿ ಸಹ ಇದ್ದರು.

ಡಿಂಗ್ಕೊ 2017 ರಿಂದ ನವದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 41 ವರ್ಷದ ಬಾಕ್ಸಿಂಗ್ ಚಾಂಪಿಯನ್ ಹದಿನೈದು ದಿನಗಳ ಹಿಂದೆಯೇ ವಿಕಿರಣ ಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದರು. ಆದರೆ ಭಾರತ ಲಾಕ್‌ಡೌನ್ ಆಗಿದ್ದರಿಂದ ದೆಹಲಿಗೆ ಬರಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಬಿಎಫ್‌ಐ ಸ್ಪೈಸ್‌ ಜೆಟ್ ಏರ್ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ ಡಿಂಗ್ಕೊ ಅವರನ್ನು ದೆಹಲಿ ಆಸ್ಪತ್ರೆಗೆ ತಲುಪಿಸಿದೆ.

ABOUT THE AUTHOR

...view details