ಕರ್ನಾಟಕ

karnataka

ETV Bharat / bharat

ಬುಮ್ರಾ ಶೈಲಿಯಲ್ಲೇ ಅಜ್ಜಿ ಬೌಲಿಂಗ್​​; ವಿಡಿಯೋ ನೋಡಿ ಈ ಮಾತು ಹೇಳಿದ ಬೌಲರ್​! - ಬೌಲಿಂಗ್​ ಶೈಲಿ

ಟೀಂ ಇಂಡಿಯಾದ ಯಾರ್ಕರ್​ ಸ್ಪೇಷಲಿಸ್ಟ್​ ಜಸ್​ಪ್ರೀತ್​ ಬುಮ್ರಾ ವಿಶಿಷ್ಠ ಬೌಲಿಂಗ್​ ಶೈಲಿ ಹೊಂದಿದ್ದು, ಅದನ್ನು ಅಜ್ಜಿಯೊಬ್ಬರು ಅನುಕರಣೆ ಮಾಡಿದ್ದಾರೆ.

ಬುಮ್ರಾ ಶೈಲಿಯಲ್ಲೇ ಅಜ್ಜಿ ಬೌಲಿಂಗ್

By

Published : Jul 13, 2019, 10:17 PM IST

ಲಂಡನ್​​:ಟೀಂ ಇಂಡಿಯಾ ಯಾರ್ಕರ್​ ಸ್ಪೆಷಲಿಸ್ಟ್​ ಜಸ್​ಪ್ರೀತ್​ ಬುಮ್ರಾ ಬೌಲಿಂಗ್​ ಮಾಡುವುದೇ ವಿಭಿನ್ನವಾಗಿ. ಅವರ ಬೌಲ್​ ಮಾಡುವ ಶೈಲಿಯನ್ನು ಈ ಹಿಂದೆ ಪಾಕ್​​ನ ಪುಟ್ಟ ಬಾಲಕನೋರ್ವ ಅನುಕರಣೆ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಇದೀಗ ಅಜ್ಜಿಯೋರ್ವಳು ಆ ರೀತಿ ಬೌಲಿಂಗ್​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ.

ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಅದ್ಭುತ ಬೌಲಿಂಗ್​ ಮಾಡಿರುವ ಬುಮ್ರಾ 18 ವಿಕೆಟ್​ ಪಡೆದುಕೊಂಡಿದ್ದಾರೆ. ಆದರೆ ಸೆಮಿಫೈನಲ್​​ನಲ್ಲಿ ಟೀಂ ಇಂಡಿಯಾ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ. ಇಷ್ಟಾದ್ರೂ ಅವರ ಬೌಲಿಂಗ್​​ನಿಂದ ಪ್ರಭಾವಿತರಾದ ವೃದ್ದೆಯೊಬ್ಬರು ಅವರ ಹಾಗೇ ಬೌಲಿಂಗ್​ ಮಾಡಲು ಹೋಗಿ ಗಮನ ಸೆಳೆದಿದ್ದಾರೆ.

ಟಿವಿಯಲ್ಲಿ ಜಸ್​ಪ್ರೀತ್​ ಬುಮ್ರಾ ಬೌಲಿಂಗ್​ ಮಾಡುವ ಶೈಲಿ ನೋಡಿರುವ ಅಜ್ಜಿ, ಕೈಯಲ್ಲಿ ಫುಟ್ಬಾಲ್​ ಹಿಡಿದುಕೊಂಡು ಅವರು ಬೌಲಿಂಗ್​ ಮಾಡುವ ಶೈಲಿಯಲ್ಲೇ ಆ್ಯಕ್ಷನ್ ಮಾಡಿದ್ದಾರೆ. ಈ ವಿಡಿಯೋ ನೋಡಿರುವ ಜಸ್​ಪ್ರೀತ್​ ಬುಮ್ರಾ, ನನ್ನ ಶ್ರಮ ಸಾರ್ಥಕವಾಯ್ತು. ಈ ದಿನ ಅದ್ಭುತ ಎಂದು ಟ್ವೀಟ್​ ಮಾಡಿದ್ದಾರೆ.

ABOUT THE AUTHOR

...view details