ಮುಂಬೈ:ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಸಾವಿರಾರು ಕಾರ್ಮಿಕರಿಗೆ ನೆರವಾಗಿದ್ದ ಬಾಲಿವುಡ್ ನಟ ಸೋನು ಸೂದ್ ಅವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಶ್ಲಾಘಿಸಿದ್ದಾರೆ.
ಮುಂಬೈನ ಉಪನಗರದಲ್ಲಿ ಮಾತೋಶ್ರೀ ನಿವಾಸದಲ್ಲಿ ನಟ ಠಾಕ್ರೆ ಅವರನ್ನು ಸೋನು ಸೂದ್ ಭೇಟಿಯಾಗಿದ್ದಾರೆ. ಆದರೆ, ಈ ಭೇಟಿ ನಡೆಯುವ ಒಂದು ದಿನದ ಹಿಂದೆ ಠಾಕ್ರೆ ನೇತೃತ್ವದ ಶಿವಸೇನೆ ಸೋನು ಅವರನ್ನು , ಬಿಜೆಪಿ ಬರೆದ ರಾಜಕೀಯ ಕಥೆಯನ್ನು ಅವರು ಜಾರಿಗೊಳಿಸುತ್ತಿದ್ದಾರೆ ಎಂದು ಸೂದ್ ವಿರುದ್ಧ ಕಿಡಿಕಾರಿದ್ದರು.
ಸೇನಾ ಸಂಸದ ಸಂಜಯ್ ರಾವುತ್, ಲಾಕ್ಡೌನ್ ಮಧ್ಯೆ ಮಹಾರಾಷ್ಟ್ರದಲ್ಲಿ ಸಿಲುಕಿರುವ ಉತ್ತರ ಭಾರತದಿಂದ ವಲಸೆ ಬಂದ ಕಾರ್ಮಿಕರಿಗೆ ಸಹಾಯ ಮಾಡಲು ಬಿಜೆಪಿ ಬಾಲಿವುಡ್ ನಟನನ್ನು ಮುಂದಕ್ಕೆ ತಳ್ಳಿದೆ. ಈ ಮೂಲಕ ಉದ್ದವ್ ಠಾಕ್ರೆ ಸರ್ಕಾರವನ್ನು ಕೆಟ್ಟದಾಗಿ ತೋರಿಸಬೇಕೆಂಬ ರಾಜಕೀಯ ಉದ್ದೇಶವನ್ನು ಬಿಜೆಪಿ ಹೊಂದಿದೆ ಎಂದು ಟೀಕಿಸಿದ್ದಾರೆ.
ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಭಾನವಾರದ ಅಂಕಣವಾದ ರೋಖ್ಟಾಕ್ ನಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ಮಹಾರಾಷ್ಟ್ರದ ಸಾಮಾಜಿಕ ದೃಶ್ಯದಲ್ಲಿ ‘ಮಹಾತ್ಮ’ಸೂದ್ ಹಠಾತ್ ಉದಯಿಸಿದ್ದನ್ನು ಪ್ರಶ್ನಿಸಿದ್ದರು.
2019ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಸೋನು ಸೂದ್ ವಿರುದ್ಧ ಸ್ಟಿಂಗ್ ಆಪರೇಷನ್ಗೆ ಆದೇಶಿಸಿದ್ದನ್ನು ಉಲ್ಲೇಖಿಸಿದ್ದಾರೆ. ಸೋನು ಬಿಜೆಪಿಯ ಪರ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮಗಳ ಖಾತೆಗಳ ಮೂಲಕ ವಿವಿಧ ಖಾತೆಗಳಲ್ಲಿ ಉತ್ತೇಜಿಸಲು ಒಪ್ಪಿಕೊಂಡಿದ್ದಾರೆ ಎಂದು ಅರೋಪಿಸಿದ್ದರು.