ಕರ್ನಾಟಕ

karnataka

ETV Bharat / bharat

ದಿಢೀರ್ ಅಂತಾ ಮೋದಿ - ಟ್ರಂಪ್​ ಫೋನ್ ಸಂಭಾಷಣೆ: ಚೀನಾ ನಿಲುವು ಬದಲು - ಲಡಾಕ್ ನಿಲುವು

ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಭಾರತದೊಂದಿಗಿನ ಗಡಿ ವಿಷಯದಲ್ಲಿ ಚೀನಾದ ನಿಲುವು "ಸ್ಥಿರ ಮತ್ತು ಸ್ಪಷ್ಟವಾಗಿದೆ. ಎರಡೂ ದೇಶಗಳ ನಾಯಕರ ಒಮ್ಮತವನ್ನು ಶ್ರದ್ಧೆಯಿಂದ ಜಾರಿಗೆ ತಂದಿವೆ ಎಂದು ಹೇಳಿದರು.

Indo-China relations
ಭಾರತ ಚೀನಾ

By

Published : Jun 3, 2020, 5:43 PM IST

ನವದೆಹಲಿ: ಎರಡು ನೆರೆಹೊರೆಯ ರಾಷ್ಟ್ರಗಳು ಸಂವಾದದ ಮೂಲಕ ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪೂರ್ಣ ಪ್ರಮಾಣದ ಗಡಿ - ಸಂಬಂಧಿತ ಕಾರ್ಯವಿಧಾನ ಹಾಗೂ ಸಂವಹನ ಮಾರ್ಗಗಳನ್ನು ಹೊಂದಿವೆ. ಭಾರತದೊಂದಿಗೆ ತನ್ನ ಪ್ರಸ್ತುತ ನಿಲುವು ಪರಿಹರಿಸಲು ಮೂರನೇ ವ್ಯಕ್ತಿಯ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಚೀನಾ ಒತ್ತಿ ಹೇಳಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಭಾರತದೊಂದಿಗಿನ ಗಡಿ ವಿಷಯದಲ್ಲಿ ಚೀನಾದ ನಿಲುವು "ಸ್ಥಿರ ಮತ್ತು ಸ್ಪಷ್ಟವಾಗಿದೆ. ಎರಡೂ ದೇಶಗಳ ನಾಯಕರ ಒಮ್ಮತವನ್ನು ಶ್ರದ್ಧೆಯಿಂದ ಜಾರಿಗೆ ತಂದಿವೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ದೂರವಾಣಿ ಕರೆ ಕುರಿತ ಪ್ರಶ್ನೆಗೆ ಜಾವೋ ಉತ್ತರಿಸಿ, ಈಗ ಅಲ್ಲಿನ ಪರಿಸ್ಥಿತಿ (ಭಾರತ-ಚೀನಾ ಗಡಿ) ಸ್ಥಿರ ಮತ್ತು ನಿಯಂತ್ರಿಸಬಲ್ಲದು. ಚೀನಾ ಮತ್ತು ಭಾರತವು ಪೂರ್ಣ ಪ್ರಮಾಣದ ಗಡಿ ಸಂಬಂಧಿತ ಸಂವಹನ ಮಾರ್ಗಗಳನ್ನು ಹೊಂದಿವೆ. ಸಂವಾದ ಮತ್ತು ಸಮಾಲೋಚನೆಯ ಮೂಲಕ ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ. ಮೂರನೇ ವ್ಯಕ್ತಿಯ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಜಾವೋ ಒತ್ತಿ ಹೇಳಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ವಾರ ಉಭಯ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಹೇಳಿದ್ದಾರೆ. ಈಗ ಉಲ್ಬಣಗೊಳ್ಳುತ್ತಿರುವ ಗಡಿ ವಿವಾದಕ್ಕೆ ಯುನೈಟೆಡ್ ಸ್ಟೇಟ್ಸ್ ಸಿದ್ಧವಾಗಿದೆ. ಆದರೆ, ಭಾರತ ಮತ್ತು ಚೀನಾ ಅಮೆರಿಕದ ಮಧ್ಯಸ್ಥಿಕೆಯನ್ನು ತಿರಸ್ಕರಿಸಿವೆ.

ಗಡಿ ವಿಷಯದಲ್ಲಿ ಚೀನಾದ ನಿಲುವು ಸ್ಥಿರ ಮತ್ತು ಸ್ಪಷ್ಟವಾಗಿದೆ. ಇಬ್ಬರು ನೆರೆಹೊರೆಯವರು ತಮ್ಮ ನಾಯಕರ ನಡುವೆ ತಲುಪಿದ ಪ್ರಮುಖ ಒಮ್ಮತವನ್ನು ಶ್ರದ್ಧೆಯಿಂದ ಜಾರಿಗೆ ತಂದಿದ್ದಾರೆ ಎಂದು ಪುನರುಚ್ಚರಿಸಿದರು.

ABOUT THE AUTHOR

...view details