ಕರ್ನಾಟಕ

karnataka

ETV Bharat / bharat

ಮೇ 25ರಿಂದ ದೇಶೀಯ ವಿಮಾನಗಳ ಹಾರಾಟ - ಇಂದಿನಿಂದಲೇ ಬುಕ್ಕಿಂಗ್​ ಶುರು? - Civil Aviation

ದೇಶೀಯ ವಿಮಾನಗಳ ಬುಕ್ಕಿಂಗ್​​​​​​ಗೆ ಅವಕಾಶ ನೀಡಲು ಕೈಗೊಳ್ಳಬೇಕಾದ ನಿರ್ಧಾರಗಳ ಕುರಿತು ಇಂದು ವಿಮಾನಯಾನ ಅಧಿಕಾರಿಗಳ ಸಭೆ ನಡೆಯಲಿದೆ.

Bookings for domestic flights likely to start from Thursday
ವಿಮಾನಯಾನ ಸೇವೆ

By

Published : May 21, 2020, 1:14 PM IST

Updated : May 21, 2020, 1:21 PM IST

ನವದೆಹಲಿ: ಕೊರೊನಾ ಪ್ರೇರಿತ ಲಾಕ್​​​ಡೌನ್​​ನಿಂದಾಗಿ ಸ್ಥಗಿತಗೊಂಡಿದ್ದ ದೇಶೀಯ ವಿಮಾನಯಾನ ಸೇವೆ ಸೋಮವಾರದಿಂದ (ಮಾರ್ಚ್​​ 25) ಪ್ರಾರಂಭವಾಗಲಿದೆ. ಹೀಗಾಗಿ, ಇಂದಿನಿಂದಲೇ ಬುಕ್ಕಿಂಗ್​​​ಗೆ ಅವಕಾಶ ನೀಡುವ ಸಾಧ್ಯತೆ ಇದೆ.

ದೇಶದ ಎಲ್ಲಾ ವಿಮಾನ ನಿಲ್ದಾಣಗಳು ವಿಮಾನಗಳು ಮೂರನೇ ಒಂದು ಭಾಗದಷ್ಟು ವೇಳಾಪಟ್ಟಿಯೊಂದಿಗೆ ಕಾರ್ಯನಿರ್ವಹಿಸಲಿವೆ ಎಂದು ದೆಹಲಿ ವಿಮಾನ ನಿಲ್ದಾಣ ಮತ್ತು ಖಾಸಗಿ ವಿಮಾನಯಾನ ಸಂಸ್ಥೆಗಳ ಮೂಲಗಳು ಈಟಿವಿ ಭಾರತ್‌ಗೆ ತಿಳಿಸಿವೆ. ವಿಮಾನಗಳು ಪುನರಾರಂಭಕ್ಕೆ ಸಂಬಂಧಿಸಿದಂತೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.

ಮೂಲಗಳ ಪ್ರಕಾರ, ಮೇ 25ರಿಂದ ಆರಂಭವಾಗಲಿರುವ ವಿಮಾನಗಳ ಬುಕ್ಕಿಂಗ್​​​​​​ಗೆ ಇಂದಿನಿಂದ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ. ಇಂದು ನಡೆಯಲಿರುವ ವಿಮಾನಯಾನ ಅಧಿಕಾರಿಗಳ ಸಭೆಯ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು.

ದೆಹಲಿ ಮತ್ತು ಮುಂಬೈ ನಡುವೆ ಒಂದು ದಿನದಲ್ಲಿ 21 ವಿಮಾನಗಳನ್ನು ಕಾರ್ಯ ನಿರ್ವಹಿಸುತ್ತಿದ್ದರೆ, ಅದರಲ್ಲಿ ಈಗ ಏಳು ವಿಮಾನಗಳನ್ನು ಮಾತ್ರ ನಿರ್ವಹಿಸಲು ಸಾಧ್ಯವಾಗುತ್ತದೆ.

ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ​​ಈ ಹಿಂದೆ ಎಲ್ಲಾ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಮೇ 31ರವರೆಗೆ ಸ್ಥಗಿತಗೊಳಿಸಿತ್ತು. ಮಾರ್ಚ್ 25ರಿಂದ ದೇಶಾದ್ಯಂತ ಲಾಕ್​​​​ಡೌನ್ ವಿಧಿಸಿದ ನಂತರ ವಾಣಿಜ್ಯ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ವಿಮಾನಯಾನ ಸೇವೆಗೆ ಕಾರ್ಯಾಚರಣೆ ಪುನರಾರಂಭಕ್ಕಾಗಿ ಎಸ್‌ಒಪಿ ಮತ್ತು ಕಾರ್ಯಾಚರಣೆ ನಡೆಸಬೇಕಾದ ವಿಮಾನಗಳ ವಿವರಗಳು ಇನ್ನು ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಸ್ಪೈಸ್ ಜೆಟ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಹೇಳಿದರು.

ಕಳೆದ ವಾರವಷ್ಟೆ, ನಾಗರಿಕ ವಾಯುಯಾನ ಸುರಕ್ಷತಾ ಘಟಕವು (ಬಿಸಿಎಎಸ್), ಪ್ರಯಾಣಿಕರ ಬೋರ್ಡಿಂಗ್ ಪಾಸ್​​​​​​​ಗಳ ಮೇಲೆ ಸ್ಟಾಂಪಿಂಗ್​​ ಮಾಡುವುದನ್ನು ನಿಲ್ಲಿಸುವುದಾಗಿ ಹೇಳಿತ್ತು. 350 ಮಿಲಿ ಲೀಟರ್​​ ಹ್ಯಾಂಡ್ ಸ್ಯಾನಿಟೈಸರ್ ಅನುಮತಿ ನೀಡಿತ್ತು.

Last Updated : May 21, 2020, 1:21 PM IST

ABOUT THE AUTHOR

...view details