ಜಲಗಾಂವ್(ಮಹಾರಾಷ್ಟ್ರ): ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದ್ದು, ಕೆಲವೊಂದು ರಾಜ್ಯಗಳಲ್ಲಿ ಇದರ ಸ್ಥಿತಿ ಹೇಳಲು ಸಾಧ್ಯವಾಗದಂತಹ ರೀತಿಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದೆ.
ಆದರೆ ಇದರ ಪ್ರಯೋಜನ ಪಡೆದುಕೊಳ್ಳುತ್ತಿರುವ ಬುಕ್ಕಿಗಳು ಐಪಿಎಲ್ನಲ್ಲಿ ನಡೆಸುತ್ತಿದ್ದ ಬೆಟ್ಟಿಂಗ್ ರೀತಿಯಲ್ಲಿ ಕೊರೊನಾ ಮೇಲೂ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಪ್ರತಿ ವರ್ಷ ಮಾರ್ಚ್ ತಿಂಗಳಿಂದ ಜೂನ್ವರೆಗೂ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುವುದರಿಂದ ಬುಕ್ಕಿಗಳು ಇದರಲ್ಲಿ ಫುಲ್ ಬ್ಯುಸಿ ಆಗಿರುತ್ತಿದ್ದರು. ಆದರೆ ಇದೀಗ ಟೂರ್ನಿ ನಿಷೇಧಗೊಂಡಿರುವ ಕಾರಣ ಅವರಿಗೆ ಬೇರೆ ಹಾದಿ ಕಾಣದಂತಾಗಿದ್ದು, ಸದ್ಯ ಕೊರೊನಾ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದಾರೆ.