ಮುಂಬೈ:ಬಾಲಿವುಡ್ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರಿಗೆ ಕೊರೊನಾ ವೈರಸ್ ದೃಢಪಟ್ಟಿತ್ತು. ಇದೀಗ ಆ ಮೂವರು ಕೊರೊನಾದಿಂದ ಗುಣಮುಖರಾಗಿದ್ದಾರೆಂದು ಬೋನಿ ಕಪೂರ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಅವರು ಮತ್ತು ಅವರ ಪುತ್ರಿಯರಾದ ಜಾಹ್ನವಿ, ಖುಷಿ ಮನೆಯಲ್ಲಿಯೇ ಕ್ವಾರಂಟೈನ್ ಅವಧಿಯನ್ನು ಮುಗಿಸಿರುವುದಾಗಿ ತಿಳಿಸಿದ್ದಾರೆ.
ಮನೆಗೆಲಸದವರು ಗುಣಮುಖ.. ಹೋಂ ಕ್ವಾರಂಟೈನ್ ಮುಗಿಸಿದ ಬೋನಿ ಕಪೂರ್ ಕುಟುಂಬ.. - ಹೋಂ ಕ್ವಾರಂಟೈನ್ ಮುಗಿಸಿದ ಬೋನಿ ಕಪೂರ್ ಕುಟುಂಬ
ಪುತ್ರಿಯರ ಜೊತೆಗೆ ನಮ್ಮ 14 ದಿನಗಳ ಹೋಂ ಕ್ವಾರಂಟೈನ್ ಮುಗಿಸಿದ್ದೇವೆ. ಅವರ ಇಬ್ಬರ ಪುತ್ರಿಯ ವರದಿಯೂ ಕೂಡ ನೆಗೆಟಿವ್ ಬಂದಿರುವುದಾಗಿ ಅವರು ಖುಷಿಯನ್ನು ಹಂಚಿಕೊಂಡಿದ್ದಾರೆ.
![ಮನೆಗೆಲಸದವರು ಗುಣಮುಖ.. ಹೋಂ ಕ್ವಾರಂಟೈನ್ ಮುಗಿಸಿದ ಬೋನಿ ಕಪೂರ್ ಕುಟುಂಬ.. Boney Kapoor's staff](https://etvbharatimages.akamaized.net/etvbharat/prod-images/768-512-7488388-thumbnail-3x2-smk.jpg)
ಪುತ್ರಿಯರ ಜೊತೆಗೆ ನಮ್ಮ 14 ದಿನಗಳ ಹೋಂ ಕ್ವಾರಂಟೈನ್ ಮುಗಿಸಿದ್ದೇವೆ. ಅವರ ಇಬ್ಬರ ಪುತ್ರಿಯ ವರದಿಯೂ ಕೂಡ ನೆಗೆಟಿವ್ ಬಂದಿರುವುದಾಗಿ ಅವರು ಖುಷಿಯನ್ನು ಹಂಚಿಕೊಂಡಿದ್ದಾರೆ.
ಬಿಎಂಸಿ ಕಾರ್ಯಕರ್ತರು ಮತ್ತು ಮುಂಬೈ ಪೊಲೀಸರಿಗೆ ಧನ್ಯವಾದ ಅರ್ಪಿಸಿದ ಕಪೂರ್, ನಮಗೆ ಮಾತ್ರವಲ್ಲ ಮಹಾರಾಷ್ಟ್ರದಾದ್ಯಂತ ಮತ್ತು ಎಲ್ಲರಿಗೂ ಸಹಾಯ ಮತ್ತು ಬೆಂಬಲ ನೀಡಿದ ವೈದ್ಯರು, ಆರೋಗ್ಯ ಕಾರ್ಯಕರ್ತರು, ಬಿಎಂಸಿ, ಮುಂಬೈ ಪೊಲೀಸ್, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನನ್ನ ಕುಟುಂಬ ಮತ್ತು ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ. ಎಲ್ಲರೂ ಒಟ್ಟಾಗಿ ಕೋವಿಡ್ 19 ವೈರಸ್ ಎದುರಿಸೋಣ ಎಂದು ಅವರು ಹೇಳಿದ್ದಾರೆ.