ಪಶ್ಚಿಮ ಬಂಗಾಳ: ರಾಜ್ಯದ ಪರ್ಗಾನ್ ರೈಲ್ವೆ ನಿಲ್ದಾಣದ ಬಳಿ ಬಾಂಬ್ ಪತ್ತೆಯಾಗಿದೆ. ಬಾಂಬ್ ನಿಷ್ಕ್ರಿಯಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ರೈಲ್ವೆ ನಿಲ್ದಾಣದ ಬಳಿ ಬಾಂಬ್ ಪತ್ತೆ.. - ಭಾರತ್ ಬಂದ್
ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ವಿವಿಧ ಸಂಘಟನೆಗಳು ಇಂದು ಭಾರತ್ ಬಂದ್ಗೆ ಕರೆ ನೀಡಿವೆ.
ಬಾಂಬ್ ಪತ್ತೆಯಾದ ಸ್ಥಳ
ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ವಿವಿಧ ಸಂಘಟನೆಗಳು ಭಾರತ್ ಬಂದ್ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಹೃದಯಪುರದ ಉತ್ತರ ಪರ್ಗಾನ್ ಬಳಿ ಇವತ್ತು ಬೆಳಗ್ಗೆ ಬಾಂಬ್ ಪತ್ತೆಯಾಗಿತ್ತು. ಪೊಲೀಸರು ಅದನ್ನು ನಿಷ್ಕ್ರಿಯಗೊಳಿಸಿ, ಭಾರಿ ಅನಾಹುತವೊಂದನ್ನ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರೈಲು ನಿಲ್ದಾಣದ ಬಳಿ ಮಾತ್ರವಲ್ಲ ನಗರದ ಪ್ರಮುಖ ಭಾಗಗಳಲ್ಲಿಯೂ ಬಾಂಬ್ಗಳನ್ನು ಇರಿಸಲಾಗಿದೆ ಎಂಬ ಅನುಮಾನ ಪೊಲೀಸರಲ್ಲಿ ವ್ಯಕ್ತವಾಗಿದೆ. ಹಾಗಾಗಿ ಎಲ್ಲೆಡೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.