ಮುಂಬೈ: ಬಾಲಿವುಡ್ ಖ್ಯಾತನಾಮರಾದ ಅನುಪಮ್ ಖೇರ್, ಶಾಹಿದ್ ಕಪೂರ್, ಅನುರಾಗ್ ಕಶ್ಯಪ್ ಸೇರಿ ಹಲವರು ನಿನ್ನೆ ಪ್ರಧಾನಿ ಮೋದಿ ಘೋಷಣೆ ಮಾಡಿದ 20 ಲಕ್ಷ ಕೋಟಿ ರೂ.ಆರ್ಥಿಕ ಪ್ಯಾಕೇಜ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ವಿಶೇಷ ಆರ್ಥಿಕ ಪ್ಯಾಕೇಜ್ಗೆ ಬಾಲಿವುಡ್ ನಟರು ಹೇಳುವುದೇನು? - ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಆರ್ಥಿಕ ಪ್ಯಾಕೇಜ್
ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದ ನಂತರ ಬಾಲಿವುಡ್ನ ಪ್ರಮುಖರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿರಿಯ ನಟ ಅನುಪಮ್ ಖೇರ್ ಪ್ರತಿಕ್ರಿಯಿಸಿ, ಪ್ರಧಾನಿ ಮೋದಿ ಜನರನ್ನು ಉದ್ದೇಶಿಸಿ ಮಾತನಾಡುವಾಗ ದೇಶ ಮಾತ್ರವಲ್ಲ, ಇಡೀ ಪ್ರಪಂಚವು ಆಲಿಸುತ್ತದೆ ಮತ್ತು ಸ್ಫೂರ್ತಿ ಪಡೆಯುತ್ತದೆ ಎಂದು ಹೊಗಳಿದ್ದಾರೆ. ಎಲ್ಲಾ 1.30 ಬಿಲಿಯನ್ ಭಾರತೀಯರು ಸ್ವಾವಲಂಬನೆ ಮಾದರಿಯನ್ನು ಅನುಸರಿಸಿದರೆ ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೇವೆ ಎಂದು ಹೇಳಿದ್ದಾರೆ.
ಹಿರಿಯ ನಟ ಮತ್ತು ರಾಜಕಾರಣಿ ಪರೇಶ್ ರಾವಲ್ ಕೂಡ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮೋದಿಯವರ ಕೆಲಸವನ್ನು ಶ್ಲಾಘಿಸಿದ್ದಾರೆ. ಹಾಗೆಯೇ ಕಬೀರ್ ಸಿಂಗ್, ಶಾಹಿದ್ ಕಪೂರ್ ಅವರು,ಸ್ಫೂ ರ್ತಿದಾಯಕ ಭಾಷಣವನ್ನು ಶ್ಲಾಘಿಸಿದ್ದಾರೆ.