ಕರ್ನಾಟಕ

karnataka

ETV Bharat / bharat

ಕೊರೊನಾ ಜಾಗೃತಿ ವಿಡಿಯೋದಲ್ಲಿ ಒಂದಾದ ಬಾಲಿವುಡ್​ ಬಿಗ್​ ಸ್ಟಾರ್ಸ್​! - ಬಾಲಿವುಡ್​ ಸುದ್ದಿ

ಕೊರೊನಾ ವೈರಸ್ ಕುರಿತಂತೆ ಜಾಗೃತಿ ಮೂಡಿಸಲು, ಬಾಲಿವುಡ್ ನಟರು ಮಹಾರಾಷ್ಟ್ರ ಸರ್ಕಾರದ ಸಹಯೋಗದೊಂದಿಗೆ ರೋಹಿತ್ ಶೆಟ್ಟಿ ಪಿಕ್ಚರ್ಸ್​ ಅವರ ಮುಂದಾಳತ್ವದಲ್ಲಿ ಕೈಜೋಡಿಸಿದ್ದಾರೆ.

Bollywood bigwigs
ಬಾಲಿವುಡ್ ಸ್ಟಾರ್ಸ್

By

Published : Mar 20, 2020, 7:50 PM IST

ಮುಂಬೈ:ಕೊರೊನಾ ವೈರಸ್ ಹರಡುವಿಕೆ ಕುರಿತಂತೆ ಜಾಗೃತಿ ಮೂಡಿಸಲು ವಿಶೇಷ ವಿಡಿಯೋ ತಯಾರಿಸಲು ಬಿಗ್​ ಬಿ ಅಮಿತಾಬ್ ಬಚ್ಚನ್, ನಟರಾದ ಅಕ್ಷಯ್ ಕುಮಾರ್, ಅಜಯ್ ದೇವ್‌ಗನ್, ಮಾಧುರಿ ದೀಕ್ಷಿತ್ ಮತ್ತು ರಣವೀರ್ ಸಿಂಗ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯ ತಾರೆಯರು ಒಂದೆಡೆ ಸೇರಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ಸಹಯೋಗದೊಂದಿಗೆ ರೋಹಿತ್ ಶೆಟ್ಟಿ ನಿರ್ಮಾಣದಲ್ಲಿ ಒಂದು ನಿಮಿಷದ ಐವತ್ತು ಸೆಕೆಂಡ್ ಸಮಯದ ವಿಡಿಯೋ ಮೂಲಕ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಮತ್ತು ಸುರಕ್ಷತೆಯಿಂದ ಹೇಗೆ ನಡೆದುಕೊಳ್ಳಬೇಕೆಂದು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತಂತೆ ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್​ ಟ್ವೀಟ್​ ಮೂಲಕ ವಿಷಯ ಹಂಚಿಕೊಂಡಿದ್ದಾರೆ.

ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ನಾವು ವೈರಸ್​ ಹರಡುವುದನ್ನು ತಡೆಯಬಹುದು ಎಂದು 77 ವರ್ಷ ವಯಸ್ಸಿನ ಅಮಿತಾಭ್​ ಬಚ್ಚನ್​ ಹೇಳಿಕೆಯೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. "ನಾವು ಒಟ್ಟಾಗಿ ಮುನ್ನಡೆಯೋಣ, ನಾವು ಒಟ್ಟಾಗಿ ಹೋರಾಡೋಣ" ಎಂಬ ಸಂದೇಶದೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ.

ABOUT THE AUTHOR

...view details