ರಾಯಪುರ (ಛತ್ತೀಸ್ಗಢ):ಭಾರತ-ಚೀನಾ ಸಂಘರ್ಷದಲ್ಲಿ ಮಡಿದ ಯೋಧ ಗಣೇಶ್ ಕುಂಜಮ್ ಪಾರ್ಥೀವ ಶರೀರ ಇಂದು ಮಧ್ಯಾಹ್ನ 1 ಗಂಟೆಗೆ ಜಿಲ್ಲೆಯ ಕಾಂಕೆರ್ಗೆ ಆಗಮಿಸಲಿದೆ.
ಯೋಧ ಗಣೇಶ್ ಕುಂಜಮ್ ಪಾರ್ಥೀವ ಶರೀರ ಇಂದು ರಾಯಪುರಕ್ಕೆ ಆಗಮನ - ಲಡಾಕ್ನ ಗಾಲ್ವಾನ್ ಕಣಿವೆ
ಭಾರತ - ಚೀನಾ ಸಂಘರ್ಷದಲ್ಲಿ ಮಡಿದ ಯೋಧ ಗಣೇಶ್ ಕುಂಜಮ್ ಪಾರ್ಥೀವ ಶರೀರ ಇಂದು ಛತ್ತೀಸ್ಗಢದ ರಾಯಪುರಕ್ಕೆ ಆಗಮಿಸಲಿದೆ.
ಯೋಧ ಗಣೇಶ್ ಕುಂಜಮ್ ಪಾರ್ಥೀವ ಶರೀರ ಇಂದು ರಾಯ್ಪುರಕ್ಕೆ ಆಗಮನ
ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ಭಾರತ - ಚೀನಾ ನಡುವೆ ನಡೆದ ಕಾದಾಟದಲ್ಲಿ 20 ಯೋಧರು ಹುತಾತ್ಮರಾಗಿದ್ದರು. ಅದರಲ್ಲಿ ಯೋಧ ಗಣೇಶ್ ಕುಂಜಮ್ ಸಹ ಮೃತರಾಗಿದ್ದು, ಅವರ ಸ್ವಗ್ರಾಮಕ್ಕೆ ಪಾರ್ಥೀವ ಶರೀರವನ್ನು ವಿಶೇಷ ವಿಮಾನದ ಮೂಲಕ ಕರೆ ತರಲಾಗುತ್ತಿದೆ.
ಗಣೇಶ್ ಸಾವಿನ ಸುದ್ದಿ ತಿಳಿದ ಬಳಿಕ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ನಮ್ಮ ಮಗ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾನೆ ಎಂದು ಗಣೇಶ್ ಪೋಷಕರು ದುಃಖದ ನಡುವೆ ಹೆಮ್ಮೆಪಟ್ಟಿದ್ದಾರೆ.