ಪುರ್ಬಾ ಮದಿನಿಪುರ:ಪಶ್ಚಿಮ ಬಂಗಾಳದ ಪೂರ್ವ ಮದಿನಿಪುರ ಜಿಲ್ಲೆಯಲ್ಲಿ ಬಿಜೆಪಿ ಬೂತ್ ಲೇವಲ್ ಅಧ್ಯಕ್ಷರ ಶವ ಪತ್ತೆಯಾಗಿದೆ.
ಬಿಜೆಪಿ ಬೂತ್ ಲೇವಲ್ ಅಧ್ಯಕ್ಷನ ಸಾವು : ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ
ರಾಮನಗರ -2 ಪುರಸಭೆ ಪ್ರದೇಶದ ವಾರ್ಡ್ ಸಂಖ್ಯೆ 41 ರ ಬಿಜೆಪಿ ಬೂತ್ ಲೇವಲ್ ಅಧ್ಯಕ್ಷರಾಗಿದ್ದ 44 ವರ್ಷದ ಪೂರ್ಣಚಂದ್ರ ದಾಸ್ ಮೃತಪಟ್ಟವರಾಗಿದ್ದಾರೆ.
ಬಿಜೆಪಿ ಬೂತ್ ಅಧ್ಯಕ್ಷ ಸಾವು
ರಾಮನಗರ -2 ಪುರಸಭೆ ಪ್ರದೇಶದಲ್ಲಿ ವಾರ್ಡ್ ಸಂಖ್ಯೆ 41ರ ಬಿಜೆಪಿ ಬೂತ್ ಅಧ್ಯಕ್ಷರಾಗಿದ್ದ 44 ವರ್ಷದ ಪೂರ್ಣಚಂದ್ರ ದಾಸ್ ಮೃತಪಟ್ಟವರಾಗಿದ್ದಾರೆ.
ಅವರ ಮನೆಯ ಸಮೀಪದ ರಸ್ತೆ ಬದಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಕಚೂರಿ ಗ್ರಾಮದ ಅರ್ಜುನಿ (41) ಬೂತ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಟಿಎಂಸಿ ಸದಸ್ಯರು ಪೂರ್ಣಚಂದ್ರ ದಾಸ್ ಅವರನ್ನ ಕೊಂದಿದ್ದಾರೆ ಎಂದು ಅವರ ಕುಟುಂಬ ವರ್ಗದವರು ಆರೋಪಿಸಿದ್ದಾರೆ. ಆದರೆ ಟಿಎಂಸಿ, ಬಿಜೆಪಿ ಕಾರ್ಯಕರ್ತರ ಈ ಆರೋಪಗಳನ್ನು ನಿರಾಕರಿಸಿದೆ.
Last Updated : Jul 30, 2020, 9:38 AM IST