ನವಜಾತ ಮಗುವಿಗೆ ಬಾಡಿ ಮಸಾಜ್ ಮಾಡುವುದರಿಂದ ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸಬಹುದು ಎಂದು ಹೈದರಾಬಾದ್‌ನ ಎಎಮ್‌ಡಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿ ಡಾ.ರಾಜ್ಯಲಕ್ಷ್ಮಿ ಮಾಧವಂ ಹೇಳುತ್ತಾರೆ. “ನಾವು ಮಕ್ಕಳು ಜನಿಸಿದ ಒಂದು ವಾರದ ನಂತರ ಸಾಮಾನ್ಯವಾಗಿ ಅಭಂಗ ಅಥವಾ ಮಸಾಜ್ ಮಾಡಲು ಪ್ರಾರಂಭಿಸುತ್ತೇವೆ. ಇದನ್ನು ಮಾಡುವಾಗ ಬಹಳ ಎಚ್ಚರಿಕೆಯಿಂದ ಮತ್ತು ಅತ್ಯಂತ ಸಮಾಧಾನವಾಗಿ ಮಾಡಬೇಕು” ಎಂದು ಅವರು ಹೇಳುತ್ತಾರೆ. ಅಲ್ಲದೇ ಮಗುವಿಗೆ ಏನಾದರೂ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸಲು ಅವರು ಶಿಫಾರಸು ಮಾಡುತ್ತಾರೆ. ಏಕೆಂದರೆ ಮಕ್ಕಳು ಈ ವಯಸ್ಸಿನಲ್ಲಿ ತುಂಬಾ ಸೂಕ್ಷ್ಮವಾಗಿರುತ್ತಾರೆ.
ಮಸಾಜ್ ಮಾಡುವುದರಿಂದ ಆಗುವ ಪ್ರಯೋಜನಗಳು:
- ಆಯಾಸ ಕಡಿಮೆಯಾಗುತ್ತದೆ.
- ರಕ್ತ ಸಂಚಲನೆ ಸರಿಯಾಗಿ ಆಗುತ್ತದೆ.
- ಇದು ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಮಕ್ಕಳಲ್ಲಿ ಜೀರ್ಣ ಕ್ರಿಯೆ ದುರ್ಬಲವಾಗಿರುತ್ತದೆ.
- ಮಗುವಿನ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.
- ಕೂದಲುಗಳು ಸಮೃದ್ಧವಾಗಿ ಬೆಳೆಯುತ್ತವೆ.
- ಮೂಳೆ, ಕೀಲುಗಳು ಮತ್ತು ಸ್ನಾಯುಗಳು ಬಲಗೊಳ್ಳುತ್ತವೆ.
- ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕೆಲವು ಚರ್ಮದ ಕಾಯಿಲೆಗಳನ್ನು ತಡೆಯುತ್ತದೆ.
ಮಕ್ಕಳಿಗೆ ಮಸಾಜ್ ಮಾಡುವ ವಿಧಾನ:
ಮಗುವಿಗೆ ಮಸಾಜ್ ಮಾಡುವಾಗ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಈ ಕ್ರಮಗಳನ್ನು ಡಾ.ರಾಜ್ಯಲಕ್ಷ್ಮಿ ಹೀಗೆ ವಿವರಿಸುತ್ತಾರೆ. ಅಂದರೆ ಯಾವ ದೇಹದ ಭಾಗದಿಂದ ಪ್ರಾರಂಭಿಸಬೇಕು.
- ಮೊದಲಿಗೆ ತಲೆಯನ್ನು ಮಸಾಜ್ ಮಾಡಬೇಕು.
- ಬಳಿಕ ಕಾಲಿನ ಅಂಗಾಲು
- ನಂತರ ಕೈ ಮತ್ತು ಕಾಲುಗಳು
- ಹೊಟ್ಟೆ ಮತ್ತು ಎದೆ
- ಕೊನೆಯಲ್ಲಿ ಬೆನ್ನಿಗೆ ಮಸಾಜ್ ಮಾಡಲು ಸೂಚಿಸುತ್ತಾರೆ.
"ಕೇವಲ ದೈಹಿಕ ಪ್ರಯೋಜನಗಳಿಗಾಗಿ ಅಲ್ಲದೇ, ಮಸಾಜ್ ಮಾಡುವುದರಿಂದ ತಾಯಿ ಮತ್ತು ಮಗುವಿನ ನಡುವೆ ಭಾವನಾತ್ಮಕ ಬಂಧನ ಬೆಳೆಯುತ್ತದೆ. ಆದ್ದರಿಂದ ನಿಯಮಿತ ಅಭಂಗ, ವಿಶೇಷವಾಗಿ ಅಕ್ಟೋಬರ್‌ನಿಂದ ಜನವರಿವರೆಗೆ ವಾರದಲ್ಲಿ 7 ದಿನ ಮಾಡುವುದು ಉತ್ತಮ”.
ಮಸಾಜ್ ಮಾಡುವಾಗ ಏನೇನು ನೆನಪಿಟ್ಟುಕೊಳ್ಳಬೇಕು?
ಹೊಟ್ಟೆ ಮತ್ತು ಎದೆಯ ಭಾಗಕ್ಕೆ ಮಸಾಜ್ ಮಾಡುವಾಗ ವಿಶೇಷ ಕಾಳಜಿ ವಹಿಸಬೇಕು.
ಪ್ರತಿದಿನ 10-15 ನಿಮಿಷಗಳ ಕಾಲ ಮಸಾಜ್ ಮಾಡಬಹುದು.