ಕೋಟಾ(ರಾಜಸ್ಥಾನ): ಸರಕು ಮತ್ತು ವಾಹನಗಳು ಸೇರಿದಂತೆ 30ಕ್ಕೂ ಹೆಚ್ಚು ಜನರನ್ನು ಸಾಗಿಸುತ್ತಿದ್ದ ದೋಣಿ ಮಗುಚಿರುವ ಘಟನೆ ಜಿಲ್ಲೆಯ ಖಟೋಲಿ ಪ್ರದೇಶದ ಗೋಥಾಕಲಾ ಗ್ರಾಮದ ಬಳಿಯ ಚಂಬಲ್ ನದಿಯಲ್ಲಿ ನಡೆದಿದೆ.
ಜನರು ದೋಣಿ ಮೂಲಕ ಕಮಲೇಶ್ವರ ಧಾಮ್ ಬುಂಡಿ ಪ್ರದೇಶಕ್ಕೆ ತೆರಳುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ದೋಣಿ ಮಗುಚಿದ್ದು, ಜನರೆಲ್ಲರೂ ನೀರಿಗೆ ಬಿದ್ದಿದ್ದಾರೆ. ಘಟನೆಯಲ್ಲಿ ಅಸುನೀಗಿರುವ 12 ಜನರ ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, 20ಕ್ಕೂ ಅಧಿಕ ಜನರನ್ನು ರಕ್ಷಣೆ ಮಾಡಲಾಗಿದೆ.