ರಾಂಚಿ:ಐಷಾರಾಮಿ ಕಾರುಗಳನ್ನು ಹೊಂದುವುದನ್ನು ಪ್ರತಿಷ್ಠೆಯ ಸಂಗತಿ ಎಂದೇ ಪರಿಗಣಿಸಲಾಗುತ್ತದೆ. ಆದರೆ, ರಾಂಚಿಯಲ್ಲಿ 90 ಲಕ್ಷ ರೂ. ಐಷಾರಾಮಿ ಬಿಎಂಡಬ್ಲ್ಯು ಕಾರನ್ನು ತ್ಯಾಜ್ಯ ಸಾಗಿಸಲು ಬಳಸಲಾಗುತ್ತದೆ.
ಹೌದು, ಅಚ್ಚರಿಯಾದ್ರೂ ಇದು ಸತ್ಯ. ರಾಂಚಿಯ ಪ್ರಿನ್ಸ್ ಶ್ರೀವಾಸ್ತವ್ ಅವರು ಒಂದೂವರೆ ವರ್ಷಗಳ ಹಿಂದೆ 90 ಲಕ್ಷ ರೂ. ಕೊಟ್ಟು ಬಿಎಂಡಬ್ಲ್ಯು ಕಾರನ್ನು ಖರೀದಿಸಿದ್ದರು. ಅದನ್ನು ಅವರು ತಂದೆಗೆ ಉಡುಗೊರೆಯಾಗಿ ನೀಡಿದ್ದರು. ಆದರೆ, ಕೇವಲ ಒಂದೂವರೆ ವರ್ಷದಲ್ಲಿ ಕಾರಿನ ಸೇವೆಯಿಂದ ಬೇಸರಗೊಂಡಿದ್ದಾರೆ. ಹೀಗಾಗಿ, ಅದರಲ್ಲಿ ಕಸವನ್ನು ಎತ್ತಿ ಸಾಗಿಸುತ್ತಿದ್ದಾರೆ. ಬಿಎಂಡಬ್ಲ್ಯು ಕಾರಿನಿಂದ ಕಸ ವಿಲೇವಾರಿ ಮಾಡುವ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಎಂಬಿಬಿಎಸ್ ಓದಿದವಳು ಡಾಕ್ಟರ್ ಆಗುವ ಬದಲು ಭಿಕ್ಷುಕಿಯಾದ ಕಥೆ!
ಈ ದುಬಾರಿ ಕಾರಿನ ಸೇವೆಯಿಂದ ಅಸಮಾಧಾನಗೊಂಡು ಕಸ ಸಾಗಿಸಲು ಪ್ರಾರಂಭಿಸಿದ್ದೇನೆ. ಕಾರನ್ನು ಖರೀದಿಸಿದಾಗ ಮಾರಾಟಗಾರರು ಉತ್ತಮ ಸೇವೆಯ ಭರವಸೆ ನೀಡಿದ್ದರು. ಕಾರಿನಲ್ಲಿ ಯಾವುದೇ ತಾಂತ್ರಿಕ ನ್ಯೂನ್ಯತೆಗಳಿದ್ದರೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ, ನಾವು ಸರಿಪಡಿಸುತ್ತೇವೆ ಎಂಬ ಆಶ್ವಾಸನೆ ಕೊಟ್ಟಿದ್ದರು. ಆದರೆ, ಕಾರು ಖರೀದಿಸಿದ 10ನೇ ದಿನ ಕಾರಿನ ಟೈರ್ ಹಾಳಾಯಿತು. 20ನೇ ದಿನ ಎರಡನೇ ಟೈರ್ ಸಿಡಿಯಿತು ಎಂದು ಪ್ರಿನ್ಸ್ ತಿಳಿಸಿದರು.