ಹೈದರಾಬಾದ್: ಖಗೋಳದಲ್ಲಿ ವಿಶೇಷವಾದ ವಿಸ್ಮಯವೊಂದು ಇಂದು ನಡೆಯಲಿದ್ದು, ಅಪರೂಪದ ಬ್ಲೂ ಮೂನ್(ಚಂದ್ರ) ದರ್ಶನವಾಗಲಿದೆ. 19 ವರ್ಷಗಳ ನಂತರ ಇದರ ದರ್ಶನವಾಗುತ್ತಿದೆ.
ಆಗಸದಲ್ಲಿಂದು ವಿಸ್ಮಯ: ಕಾಣಿಸಲಿದೆ ಅಪರೂಪದ 'ಬ್ಲೂ ಮೂನ್'! - ಬ್ಲೂ ಮೂನ್ ಸುದ್ದಿ
ಆಗಸದಲ್ಲಿ ಇಂದು ವಿಶೇಷ ವಿಸ್ಮಯವೊಂದು ನಡೆಯಲಿದ್ದು, ಬರೋಬ್ಬರಿ 19 ವರ್ಷಗಳ ಬಳಿಕ ಬ್ಲೂ ಮೂನ್ ಗೋಚರವಾಗಲಿದೆ.
![ಆಗಸದಲ್ಲಿಂದು ವಿಸ್ಮಯ: ಕಾಣಿಸಲಿದೆ ಅಪರೂಪದ 'ಬ್ಲೂ ಮೂನ್'! Blue Moon](https://etvbharatimages.akamaized.net/etvbharat/prod-images/768-512-9374331-thumbnail-3x2-wdfdfd.jpg)
ಬ್ಲೂ ಮೂನ್ ಎಂದಾಕ್ಷಣ ಚಂದ್ರ ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ ಎಂಬ ಅರ್ಥವಲ್ಲ. ಬದಲಿಗೆ ತಿಂಗಳಿಗೆ ಒಮ್ಮೆ ಕಾಣಿಸಿಕೊಳ್ಳುವ ಹುಣ್ಣಿಮೆ ಚಂದ್ರ ಇದೀಗ ಎರಡನೇಯ ಹುಣ್ಣಿಮೆ( ತಿಂಗಳಲ್ಲಿ ಎರಡು ಹುಣ್ಣಿಮೆ) ದಿನ ಕಾಣಿಸಿಕೊಳ್ಳುತ್ತಿರುವ ಕಾರಣ ಬ್ಲೂ ಮೂನ್ ಎಂದು ಕರೆಯಲಾಗುತ್ತದೆ. ತುಂಬಾ ಅಪರೂಪವಾಗಿ ಈ ಸಂದರ್ಭ ಬರುವುದರಿಂದ ಅದಕ್ಕೆ ಈ ಹೆಸರು ಇಡಲಾಗಿದೆ.
ಅಕ್ಟೋಬರ್ 31ರ ರಾತ್ರಿ ಬ್ಲೂ ಮೂನ್ ಗೋಚರಿಸಲಿದೆ. ಈ ಹಿಂದೆ ಇದೇ ತಿಂಗಳ ಅಕ್ಟೋಬರ್ 1ರಂದು ಚಂದ್ರ ಕಾಣಿಸಿಕೊಂಡಿದ್ದ. ಆದರೆ ಇದೀಗ ಮತ್ತೊಮ್ಮೆ ಗೋಚರವಾಗುತ್ತಿದೆ. 2001ರ ಜೂನ್ ತಿಂಗಳಲ್ಲಿ ಈ ರೀತಿಯ ಬ್ಲೂ ಮೂನ್ ಈ ಹಿಂದೆ ಕಾಣಿಸಿಕೊಂಡಿತ್ತು. ಇದಾದ ಬಳಿಕ 2050ರ ಸೆ. 30ರಂದು ಮುಂದಿನ ಬ್ಲೂ ಮೂನ್ ಕಾಣಿಸಿಕೊಳ್ಳಲಿದೆ.