ವಾಷಿಂಗ್ಟನ್ ಡಿಸಿ: ಟೈಪ್ - 2 ಮಾದರಿಯ ಮಧುಮೇಹದ ವ್ಯಕ್ತಿಗಳಿಗೆ ಕೋವಿಡ್ ಸೋಂಕು ತಗುಲಿದರೆ ಆರೋಗ್ಯಕ್ಕೆ ಅಪಾಯ ಹೆಚ್ಚು ಎಂದು ಹೊಸ ಅಧ್ಯಯನಗಳಿಂದ ತಿಳಿದು ಬಂದಿದೆ. ಆದರೂ ಟೈಪ್-2 ಮಧುಮೇಹ ಇದ್ದು, ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿದ್ದರೆ ಅಂಥವರಿಗೆ ಕೋವಿಡ್ನಿಂದ ಕೊಂಚ ಅಪಾಯ ಕಡಿಮೆ ಎಂದು ಕಂಡು ಬಂದಿದೆ.
"ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಕೋವಿಡ್ ಸೋಂಕು ತಗುಲಿದಲ್ಲಿ ಅಂಥವರ ಜೀವಕ್ಕೆ ಹೆಚ್ಚು ಅಪಾಯದ ಸಂಭವಿಸುವ ಹಾಗೂ ಇತರ ಆರೋಗ್ಯ ಸಮಸ್ಯೆಗಳು ಉಲ್ಬಣಿಸುವ ಸಾಧ್ಯತೆಗಳಿರುತ್ತವೆ. ಆದಾಗ್ಯೂ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಂಡ ವ್ಯಕ್ತಿಗಳಿಗೆ ಕೋವಿಡ್ ಅಪಾಯ ಕಡಿಮೆ." ಎಂದು ವುಹಾನ್ ವಿವಿಯ ರೆನ್ಮಿನ್ ಆಸ್ಪತ್ರೆಯ ಹಿರಿಯ ಸಂಶೋಧಕ ಹೊಂಗ್ಲಿಯಾಂಗ್ ಲಿ ಹೇಳಿದ್ದಾರೆ.