ಕರ್ನಾಟಕ

karnataka

ETV Bharat / bharat

ಕೊರೊನಾ ಲಾಕ್​ಡೌನ್​ನಿಂದ ಬೀದಿಗೆ ಬಿದ್ದ 70 ಕಮ್ಮಾರ ಕುಟುಂಬಗಳು - ಕಮ್ಮಾರ ಕುಟುಂಬ

ಲಾಕ್​ಡೌನ್​ ಸಂದರ್ಭದಲ್ಲಿ ತಮ್ಮ ಕುಟುಂಬದ ನಿರ್ವಣೆಗಾಗಿ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಒದಗಿಸಿಕೊಡುವಂತೆ ಕಮ್ಮಾರ ಕುಟುಂಬಗಳು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಬೀದಿಗೆ ಬಿದ್ದ ಕಮ್ಮಾರರ ಬದುಕು
ಕೊರೊನಾ ಲಾಕ್​ಡೌನ್​ ಸಮಸ್ಯೆ

By

Published : Apr 25, 2020, 1:22 PM IST

ದಿಯೋಘರ್​(ಜಾರ್ಖಂಡ್​):ರಾಷ್ಟ್ರವ್ಯಾಪಿ ಕೊರೊನಾ ಲಾಕ್​ಡೌನ್​ ಇರುವುದರಿಂದ ಜಾರ್ಖಂಡ್​ನಲ್ಲಿ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಹಾಗೂ ಕಮ್ಮಾರರು ಒಪ್ಪೊತ್ತಿನ ಊಟಕ್ಕೂ ಪರದಾಡುವಂತ ಪರಿಸ್ಥಿತಿ ಎದುರಾಗಿದೆ.

ಜಾರ್ಖಂಡ್​ನ ಪಟಾರ್ದಿಹ್​ ಗ್ರಾಮದಲ್ಲಿ ಕನಿಷ್ಠ 70 ಕಮ್ಮಾರರ ಕುಟುಂಬಗಳ ಜನರು ನಿರುದ್ಯೋಗ ಮತ್ತು ಹಸಿವಿನಿಂದ ಬಳಲುತ್ತಿದ್ದಾರೆ.

ಈ ಹಳ್ಳಿಯ ಜನರು ಕಬ್ಬಿಣದ ಪಾತ್ರೆಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಕೊರೊನ ಲಾಕ್​ಡೌನ್​ನಿಂದ ಇವರು ತಯಾರಿಸಿದ ಪಾತ್ರೆಗಳು ಮಾರಾಟವಾಗದಿರುವುದರಿಂದ ಆದಾಯ ಮೂಲ ಸ್ಥಗಿತಗೊಂಡಿದೆ. ಇದರಿಂದ ಜೀವನ ಸಂಕಷ್ಟಕ್ಕೀಡಾಗಿದ್ದು ಒಂದೊತ್ತಿನ ಊಟಕ್ಕೂ ಅಲೆಯುವಂತಾಗಿದೆ.

ಸಂಕಷ್ಟಕ್ಕೀಡಾಗಿರುವ ಕುಶಲಕರ್ಮಿ ಸಿಕಂದರ್ ಶರ್ಮಾ, "ಪ್ರತಿ ವರ್ಷ ನಾವು ಶ್ರಾವಣಿ ಜಾತ್ರೆಯಲ್ಲಿ ಪಾತ್ರೆಗಳನ್ನು ಮಾರಿ ಹಣ ಸಂಪಾದಿಸುತ್ತಿದ್ದೆವು. ಆದರೆ ಈ ವರ್ಷ ಲಾಕ್​ಡೌನ್​ ಕಾರಣದಿಂದಾಗಿ ನಮಗೆ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಪ ಸ್ವಲ್ಪ ಉಳಿತಾಯ ಮಾಡಿದ್ದ ಹಣವೂ ಖಾಲಿಯಾಗಿದೆ. ನಮಗೆ ಸಾಲ ನೀಡುತ್ತಿದ್ದವರು ನಮ್ಮ ಕೈಬಿಟ್ಟಿದ್ದಾರೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರ ನಮಗೆ ಸಹಾಯ ಮಾಡಬೇಕೆಂದು" ಕೇಳಿಕೊಂಡಿದ್ದಾರೆ.

ಮಹಿಳಾ ಕಾರ್ಮಿಕರಾದ ಮೀರಾದೇವಿ ಎಂಬುವವರು ಮಾತನಾಡಿ, "ನಾವು ಇಂತಹ ಕಠಿಣ ಸಂದರ್ಭದಲ್ಲಿ ಬದುಕುಳಿಯಲು ಹೆಣಗಾಡುತ್ತಿದ್ದೇವೆ. ಪರಿಸ್ಥಿತಿ ಹೀಗೆ ಮುಂದುವರೆದರೆ ನಮ್ಮ ಮಕ್ಕಳಿಗೆ ಹೇಗೆ ಆಹಾರ ಕೊಡಲು ಸಾಧ್ಯ? "ಎಂದು ಕಣ್ಣೀರಿಟ್ಟಿದ್ದಾರೆ.

ಕುಶಲ ಕರ್ಮಿಗಳ ವಸ್ತುಗಳನ್ನು ಕೊಳ್ಳುತ್ತಿದ್ದ ಉದ್ಯಮಿ ಮಹಾಜನ್​ ಗೋಪಾಲ್​ ಕೇಸರಿ, "ನಾವು ಅವರ ಮೇಲೆ ಅವಲಂಬಿತವಾಗಿರುವುದರಿಂದ ನಾವು ಏನನ್ನು ಗಳಿಸುತ್ತಿಲ್ಲ. ಲಾಕ್​ಡೌನ್​ನಿಂದ ನಾವೂ ಅಸಹಾಯಕರಾಗಿದ್ದೇವೆ. ಕುಶಲ ಕರ್ಮಿಗಳಿಗೆ ಸಹಾಯ ಮಾಡುವುದು ನನ್ನ ಕೈಯಲ್ಲಿಲ್ಲ" ಎಂದು ಹೇಳಿದ್ದಾರೆ.

ಲಾಕ್​ಡೌನ್​ ಸಂದರ್ಭದಲ್ಲಿ ತಮ್ಮ ಕುಟುಂಬದ ನಿರ್ವಣೆಗಾಗಿ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಒದಗಿಸಿಕೊಡುವಂತೆ ಕಮ್ಮಾರ ಕುಟುಂಬಗಳು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ABOUT THE AUTHOR

...view details