ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ಇಬ್ಬರು ಬಿಕೆಐ ಉಗ್ರರು ಅರಸ್ಟ್​ - ದೆಹಲಿ ಪೊಲೀಸ್​ ವಿಶೇಷ ಘಟಕ

ಸಿಖ್‌ ಉಗ್ರಗಾಮಿ ಸಂಘಟನೆಯಾದ ಬಬ್ಬರ್‌ ಖಾಲ್ಸಾ ಇಂಟರ್‌ ನ್ಯಾಷನಲ್‌ (ಬಿಕೆಐ)ನ ಇಬ್ಬರು ಉಗ್ರರನ್ನು ದೆಹಲಿ ಪೊಲೀಸ್​ ವಿಶೇಷ ಘಟಕ ಬಂಧಿಸಿದೆ.

BKI terrorists arrested in Delhi
ದೆಹಲಿಯಲ್ಲಿ ಇಬ್ಬರು ಬಿಕೆಐ ಉಗ್ರರು ಅರಸ್ಟ್​

By

Published : Sep 7, 2020, 12:13 PM IST

Updated : Sep 7, 2020, 12:34 PM IST

ನವದೆಹಲಿ:ವಾಯವ್ಯ ದೆಹಲಿ ಪ್ರದೇಶದಲ್ಲಿ ಪೊಲೀಸರು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿ ಬಳಿಕ ಬಬ್ಬರ್‌ ಖಾಲ್ಸಾ ಇಂಟರ್‌ ನ್ಯಾಷನಲ್‌ (ಬಿಕೆಐ) ಸಂಘಟನೆಯ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ.

ಬಂಧಿತ ಉಗ್ರರನ್ನು ಭೂಪಿಂದರ್ ಅಲಿಯಾಸ್ ದಿಲವಾರ್ ಸಿಂಗ್ ಮತ್ತು ಕುಲ್ವಂತ್ ಸಿಂಗ್ ಎಂದು ಗುರುತಿಸಲಾಗಿದ್ದು, ಇವರಿಂದ ಬೃಹತ್​ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಪಂಜಾಬ್​ನ ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇವರಿಗಾಗಿ ಶೋಧ ನಡೆಸಲಾಗುತ್ತಿತ್ತು ಎಂದು ದೆಹಲಿ ಪೊಲೀಸ್​ ವಿಶೇಷ ಘಟಕದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಬ್ಬರ್‌ ಖಾಲ್ಸಾ ಇಂಟರ್‌ ನ್ಯಾಷನಲ್‌ (ಬಿಕೆಐ), ಇದು ಸಿಖ್‌ ಉಗ್ರಗಾಮಿ ಸಂಘಟನೆಯಾಗಿದೆ.

Last Updated : Sep 7, 2020, 12:34 PM IST

ABOUT THE AUTHOR

...view details