ಕರ್ನಾಟಕ

karnataka

ETV Bharat / bharat

ಮತ್ತೆ ಕಾಂಗ್ರೆಸ್​ ಸೇರಿದ ಬಿಜೆಪಿ ಮುಖಂಡ ಬಲೇಂದು ಶುಕ್ಲಾ

2009ರಲ್ಲಿ ಕಾಂಗ್ರೆಸ್​ ಪಕ್ಷ ತೊರೆದು ಬಿಜೆಪಿ ಸೇರಿದ್ದ ಬಲೇಂದು ಶುಕ್ಲಾ, ಈಗ ಮತ್ತೆ ಕಾಂಗ್ರೆಸ್ ಸೇರಿದ್ದಾರೆ. ಅವರನ್ನು ​ಮಧ್ಯಪ್ರದೇಶ್ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

Balendu Shukla
ಬಲೇಂದು ಶುಕ್ಲಾ

By

Published : Jun 5, 2020, 7:04 PM IST

ಭೋಪಾಲ್ (ಮಧ್ಯಪ್ರದೇಶ): ಮಾಜಿ ರಾಜ್ಯ ಸಚಿವ ಹಾಗೂ ಬಿಜೆಪಿ ಮುಖಂಡ ಬಲೇಂದು ಶುಕ್ಲಾ, ಇಂದು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದಾರೆ.

ಬಲೇಂದು ಶುಕ್ಲಾ ಅವರು ಕಾಂಗ್ರೆಸ್ ಸೇರಿದ್ದಾರೆ. ಅವರು ಈ ಹಿಂದೆ ಕಾಂಗ್ರೆಸ್ ತೊರೆದ ವಿಚಾರ ಈಗ ಪಕ್ಷಕ್ಕೆ ಬೇಕಿಲ್ಲ. ಅವರು ತಮ್ಮ ಪಕ್ಷಕ್ಕೆ ಇಂದು ಮರಳಿದ್ದಾರೆ. ನಾವೆಲ್ಲರೂ ಅವರನ್ನು ಸ್ವಾಗತಿಸುತ್ತೇವೆ. ಇನ್ನೂ ಕೂಡಾ ನಮ್ಮ ಪಕ್ಷಕ್ಕೆ ಸೇರಲು ಬಯಸುವ ಅನೇಕ ಜನರಿದ್ದಾರೆ ಎಂದು ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ ಹೇಳಿದ್ದಾರೆ.

ಕಾಂಗ್ರೆಸ್​ನ ಭಾಗವಾಗಿದ್ದ ಶುಕ್ಲಾ ಅವರು, 2009 ರಲ್ಲಿ ಪಕ್ಷವನ್ನು ತೊರೆದರು. ಇತ್ತೀಚೆಗೆ ಬಿಜೆಪಿಗೆ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಅವರು ಪಕ್ಷ ತೊರೆದಿದ್ದರು ಎನ್ನಲಾಗಿದೆ. ಅಲ್ಲದೇ ಸಿಂಧಿಯಾ ಅವರ ಬಿಜೆಪಿ ಪ್ರವೇಶದಿಂದ ಶುಕ್ಲಾ ಕೋಪಗೊಂಡಿದ್ದರು ಎಂದು ಹೇಳಲಾಗಿದೆ.

ಸದ್ಯ ಪಕ್ಷಕ್ಕೆ ಶುಕ್ಲಾ ಪ್ರವೇಶದಿಂದಾಗಿ ಮುಂಬರುವ ಉಪಚುನಾವಣೆಯಲ್ಲಿ ಪಕ್ಷಕ್ಕೆ ನೆರವಾಗುತ್ತದೆ ಎಂದು ಕಾಂಗ್ರೆಸ್ ನಂಬಿದೆ. ಸಿಂಧಿಯಾ ಕಾಂಗ್ರೆಸ್ ತೊರೆದ ನಂತರ, ಪಕ್ಷದ 22 ಶಾಸಕರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದು ರಾಜ್ಯದಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್​ ಸರ್ಕಾರದ ಪತನಕ್ಕೆ ಕಾರಣವಾಗಿತ್ತು.

ABOUT THE AUTHOR

...view details