ಕರ್ನಾಟಕ

karnataka

ETV Bharat / bharat

ನೇಣು ಬಿಗಿದ ರೀತಿಯಲ್ಲಿ ವ್ಯಕ್ತಿ ಶವ ಪತ್ತೆ: ಬಿಜೆಪಿ, ಟಿಎಂಸಿ ವಾಕ್ಸಮರ

ಪಶ್ಚಿಮಬಂಗಾಳದಲ್ಲಿ ವ್ಯಕ್ತಿಯೋರ್ವನ ಶವ ನೇಣು ಮರಕ್ಕೆ ನೇಣು ಬಿಗಿದ ರೀತಿಯಲ್ಲಿ ಪತ್ತೆಯಾಗಿದ್ದು, ತನ್ನ ಕಾರ್ಯಕರ್ತನನ್ನು ಟಿಎಂಸಿ ಕೊಲೆ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.

person suicide
ವ್ಯಕ್ತಿ ಆತ್ಮಹತ್ಯೆ

By

Published : Sep 13, 2020, 2:55 PM IST

ಹೂಗ್ಲಿ (ಪಶ್ಚಿಮ ಬಂಗಾಳ):ಬಿಜೆಪಿ ಕಾರ್ಯಕರ್ತನೋರ್ವನ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತೃಣಮೂಲ ಕಾಂಗ್ರೆಸ್​ ಆತನನ್ನು ಕೊಂದಿದೆ ಎಂದು ಬಿಜೆಪಿ ಆರೋಪಿಸಿದೆ.

ಹೂಗ್ಲಿ ಬಳಿಯ ಗೋಘಾಟ್ ರೈಲ್ವೆ ನಿಲ್ದಾಣದ ಬಳಿ ಘಟನೆ ನಡೆದಿದ್ದು ಈ ವ್ಯಕ್ತಿ ಬಿಜೆಪಿಗೆ ಕಾರ್ಯಕರ್ತನಾಗಿದ್ದು, ಆತನನ್ನು ತೃಣಮೂಲ ಕಾಂಗ್ರೆಸ್​ ಕೊಲೆ ಮಾಡಿದೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್​ ಘೋಷ್ ಗಂಭೀರವಾಗಿ ಆರೋಪಿಸಿದ್ದಾರೆ.

ಸ್ಥಳೀಯರ ಪ್ರಕಾರ ಮೃತಪಟ್ಟ ವ್ಯಕ್ತಿ ಗಣೇಶ್ ರಾಯ್ ಆಗಿದ್ದು, ಶನಿವಾರ ಸಂಜೆ ತನ್ನ ಮನೆಯಿಂದ ಕಾಣೆಯಾಗಿದ್ದನು. ಇಂದು ಬೆಳಗ್ಗೆ ರೈಲ್ವೆ ನಿಲ್ದಾಣದ ಬಳಿ ಆತನ ಶವ ಪತ್ತೆಯಾಗಿದೆ.

ಬಿಜೆಪಿ ಆರೋಪವನ್ನು ನಿರಾಕರಿಸಿದ್ದು, ಆದರೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದೆಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details