ನವದೆಹಲಿ:ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್ಡಿಎ ಅಭೂತಪೂರ್ವ ಗೆಲುವು ದಾಖಲು ಮಾಡಿ, 2ನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದರ ಮಧ್ಯೆ ಅವರ ಅಭಿಮಾನಿಯೋರ್ವ ಗುಜರಾತ್ನಿಂದ ದೆಹಲಿಗೆ ಸೈಕಲ್ ಮೇಲೆ ಬಂದು ಗೆಲುವಿಗಾಗಿ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.
ಖಿಂಚಂದ್ ಚಂದ್ರಾಣಿ, ಬಿಜೆಪಿ ಕಾರ್ಯಕರ್ತ ಗುಜರಾತ್ನಲ್ಲಿ ಬಿಜೆಪಿ ಕಾರ್ಯಕರ್ತನಾಗಿರುವ ಖಿಂಚಂದ್ ಚಂದ್ರಾಣಿ, ತಮ್ಮ ಹುಟ್ಟೂರು ಅಮ್ರೆಲಿಯಿಂದ ಸೈಕಲ್ ಏರಿ ದೆಹಲಿಗೆ ಆಗಮಿಸಿ ಇವತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭಾಶಯ ಹೇಳಿದ್ದಾರೆ.
ಇದಾದ ಬಳಿಕ ಮಾತನಾಡಿರುವ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300+ ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿದರೆ, ಸೈಕಲ್ ಏರಿ ಬಂದು ಖುದ್ದಾಗಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಕೆ ಮಾಡುತ್ತೇನೆ ಎಂದು ಶಪಥ ಮಾಡಿದ್ದರಂತೆ. ಅದರಂತೆ ಬರೋಬ್ಬರಿ 17 ದಿನಗಳ ಕಾಲ ಸೈಕಲ್ ಪ್ರವಾಸ ನಡೆಸಿ ಕೊನೆಗೆ ದೆಹಲಿ ತಲುಪಿ ವಿಶ್ ಮಾಡಿದ್ದಾರೆ.
ಇನ್ನು ನಾಡಿದ್ದು ಅಮಿತ್ ಶಾ ಅವರನ್ನು ಭೇಟಿ ಮಾಡಿ ಶುಭಾಶಯ ಸಲ್ಲಿಕೆ ಮಾಡುವುದಾಗಿ ಹೇಳಿದ್ದಾರೆ. ಗುಜರಾತ್ನಿಂದ ದೆಹಲಿಗೆ ಆಗಮಿಸುತ್ತಿದ್ದ ವೇಳೆ ಚಂದ್ರಾಣಿ ಅನೇಕ ಬಿಜೆಪಿ ಕಾರ್ಯಕರ್ತರನ್ನ ಭೇಟಿ ಮಾಡಿದ್ದಾಗಿ ಹೇಳಿದ್ದಾರೆ. ತಮ್ಮನ್ನು ಭೇಟಿ ಮಾಡಿರುವ ಫೋಟೋವನ್ನ ಮೋದಿ ಖುದ್ದಾಗಿ ತಮ್ಮ ಟ್ವಿಟರ್ನಲ್ಲಿ ಹಾಕಿಕೊಂಡಿದ್ದಾರೆ.