ನವದೆಹಲಿ:ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರು ಬಿಜೆಪಿ ಗೆಲ್ಲಲ್ಲ, ಮೋದಿ ಮತ್ತೆ ಪ್ರಧಾನಿಯೂ ಆಗಲ್ಲವೆಂದು ಪುನರುಚ್ಚರಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿಬಿಜೆಪಿಯೇಬಹುಮತ ಪಡೆಯುವ ಏಕೈಕ ಪಕ್ಷವೆಂದು ನಾಯಕರು ಹೇಳುತ್ತಿದ್ದಾರೆ. ಆದರೆ ಬಿಜೆಪಿಗೆ ಬಹುಮತ ಸಿಗದು. ಬಿಜೆಪಿಯದ್ದೇ ಸರ್ಕಾರ ರಚನೆ ಕನಸಿನ ಮಾತು. ಬೇರೆ ಪಕ್ಷಗಳ ನೆರವಿದ್ದರೆ ಮಾತ್ರ ಬಿಜೆಪಿ ಸರ್ಕಾರ ರಚಿಸಬಹುದು. ಆದರೆ ಆ ಪಕ್ಷಗಳು ಮೋದಿ ಬದಲಿಗೆ ಬೇರೊಬ್ಬರನ್ನು ಪ್ರಧಾನಿಯನ್ನಾಗಿ ಮಾಡಬಹುದು ಎಂದು ಪವಾರ್ ವಿಶ್ಲೇಷಿಸಿದ್ದಾರೆ.